×
Ad

ಸೆ.24ರಂದು ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಕೃತಿ ಬಿಡುಗಡೆ; ಶಿಖರೋಪನ್ಯಾಸ, ಸಂವಾದ

Update: 2023-09-14 21:37 IST

ಉಡುಪಿ, ಸೆ.14: ಭಾರತ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಹಾಗೂ ಭಾರತದ ಉದಾರೀಕರಣದ ರೂವಾರಿ ಗಳಲ್ಲಿ ಒಬ್ಬರಾದ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರು ಇದೇ ಸೆ.24ರ ರವಿವಾರದಂದು ತಲ್ಲೂರು ನುಡಿಮಾಲೆ- 2023ರಲ್ಲಿ ‘ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿಗೆ ಹೊಸ ಸವಾಲುಗಳು’ ಎಂಬ ವಿಷಯದ ಮೇಲೆ ದತ್ತಿನಿಧಿ ಶಿಖರೋಪನ್ಯಾಸ ನೀಡಲಿದ್ದಾರೆ.

ಉಡುಪಿ ನಗರದ ಅಜ್ಜರಕಾಡಿನ ಪುರಭವನದಲ್ಲಿ ಅಪರಾಹ್ನ 3:00ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ ಅಹ್ಲೂವಾಲಿಯಾ ಅವರ ‘ಬ್ಯಾಕ್‌ಸ್ಟೇಜ್’ ಕೃತಿಯ ಕನ್ನಡ ಅನುವಾದವೂ ಬಿಡುಗಡೆಗೊಳ್ಳಲಿದೆ.ಶಿವಮೊಗ್ಗದ ಅಹರ್ನಿಶಿ ಪ್ರಕಾಶನದಿಂದ ಪ್ರಕಟಗೊಳ್ಳಲಿರುವ ಈ ಕೃತಿಯನ್ನು ಖ್ಯಾತ ಲೇಖಕ, ಅನುವಾದಕ ರಾಜಾರಾಮ್ ತಲ್ಲೂರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರು ಕನ್ನಡ ಅನುವಾದ ‘ ಎ.ಡಾಕ್ಯುಮೆಂಟ್’ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಕೃತಿಯ ಕುರಿತು ಬೆಂಗಳೂರಿನ ಐಐಎಂಬಿಯ ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ.ಎಂ.ಎಸ್. ಶ್ರೀರಾಮ್ ಮಾತನಾಡಲಿದ್ದಾರೆ. ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿರುವರು.

ಅಹ್ಲೂವಾಲಿಯಾ ಅವರ ಉಪನ್ಯಾಸದ ಬಳಿಕ ಪ್ರೊ.ಶ್ರೀರಾಮ್ ಅವರು ಮೊಂಟೆಕ್‌ರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರಾದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News