×
Ad

ಸತ್ಯಸಾಯಿ ಪ್ರಸಾದ್ ಅವರ ‘ಸಾಯಿ ಪ್ರಸಾದ’ ಕೃತಿ ಬಿಡುಗಡೆ

Update: 2024-08-26 18:29 IST

ಉಡುಪಿ: ಮಣಿಪಾಲ ಸಮೀಪದ ರಾಜೀವ ನಗರ ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸತ್ಯಸಾಯಿ ಪ್ರಸಾದ್ ಅವರ ಎರಡನೇ ಕೃತಿ ಸಾಯಿ ಪ್ರಸಾದವನ್ನು ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಗಣಪತಿ ಬಿಡುಗಡೆ ಗೊಳಿಸಿದರು.

ಬಳಿಕ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ಬರೀ ಅಂಕ ಗಳಿಕೆಯ ಮೇಲೆ ನಿಂತಿದೆ. ಸಾಹಿತ್ಯ, ಮಾನವೀಯ ಮೌಲ್ಯ ಗಳಿಗೆ ಬೆಲೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ಶಿಕ್ಷಣದ ಅವಶ್ಯಕತೆ ಇದ್ದು ಸಾಯಿ ಪ್ರಸಾದ ಕೃತಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಕೈಪಿಡಿಯಾಗಿದೆ. ಪ್ರತೀ ಶಾಲೆ ಹಾಗೂ ಮನೆಗಳಲ್ಲಿ ಸಂಗ್ರಹಕ್ಕೆಯೋಗ್ಯವಾದ ಪುಸ್ತಕವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು 80 ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ ಕೊಟ್ಯಾನ್ ವಹಿಸಿದ್ದರು. ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಡಾ.ಅಶೋಕ್ ಕಾಮತ್, ಡಾ.ರಮಾನಂದ ಭಟ್, ಉಡುಪಿ ಬಿಇಒ ಡಾ.ಎಲ್ಲಮ್ಮ, ಬೈಂದೂರು ಬಿಇಒ ನಾಗೇಶ್ ನಾಯಕ್, ಬ್ರಹ್ಮಾವರ ಬಿಇಒ ಶಬನಾ ಅಂಜುಮ್, ಇಂದಿರಾ ಪ್ರಸಾದ್, ಪತ್ರಾಂಕಿತ ಸಹಾಯಕರು ಪೂರ್ಣಿಮಾ, ಕಾರ್ಕಳ ಬಿಇಒ ಲೋಕೇಶ್, ಯೋಗನರಸಿಂಹ, ಗೋಪಾಲ ಯು., ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಸುಭಾಸ್ ಸಾಂಕಲ್ಕರ್, ಅಂಪಾರು ದಿನಕರ ಶೆಟ್ಟಿ, ಸಂಜೀವ ದೇವಾಡಿಗ ಕಾರ್ಕಳ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಪ್ರಶಾಂತ್ ಶೆಟ್ಟಿ ಹಾವಂಜೆ, ವಿಶ್ವಾಸ್ ಮಲ್ಪೆ, ವಿಶ್ವನಾಥ್ ಬಾಯರಿ, ಪ್ರಶಾಂತ್ ಬಾಯರಿ, ಸುಂದರ ಮಾಸ್ತರ್, ಕಳತ್ತೂರು ಸೀತಾರಾಮ ಶೆಟ್ಟಿ, ವೇಣುಗೋಪಾಲ್‌ಉದ್ಯಾವರ, ಚಂದ್ರಶೇಖರ ಸುವರ್ಣ, ಎಸ್‌ಡಿಎಂಸಿ ಸುಮಿತ್ರಾ, ರವಿ ಕೆ., ಮಲ್ಲಿಕಾ ದೇವಿ ಕೊಡವೂರು, ಜಗನ್ನಾಥ್ ಅಂಬಲಪಾಡಿ, ರವೀಂದ್ರ ಶೆಟ್ಟಿ, ಪ್ರದೀಪ್ ಕುಮಾರ್ ಆತ್ರಾಡಿ, ರಾಜೀವ ನಗರ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.

ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಪಿ.ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಕಾಶ್ ಪ್ರಭು ವಂದಿಸಿದರು. ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News