‘ಕಣ್ಣಿಗೆ ಕಾಣುವ ದೇವರು’ ಪುಸ್ತಕ ಬಿಡುಗಡೆ
ಉಡುಪಿ: ಮನೋವೈದ್ಯ, ಲೇಖಕ ಡಾ.ವಿರೂಪಾಕ್ಷ ದೇವರಮನೆ ಅವರ ‘ಕಣ್ಣಿಗೆ ಕಾಣುವ ದೇವರು’ ಪುಸ್ತಕ ಬಿಡುಗಡೆ ಸಮಾರಂಭವು ರವಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಪುಸ್ತಕ ಬಿಡುಗಡೆಗೊಳಿಸಿ ಪೋಷಕರು ಆರು ಬಗೆ ನೀವ್ಯಾರು ವಿಷಯದ ಕುರಿತು ಮಾತನಾಡಿದರು.
ಉಡುಪಿ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಮಾತನಾಡಿ, ಪ್ರಸ್ತುತ ಯುವ ಜನರಲ್ಲಿ ವಿವಿಧ ರೀತಿಯ ಒತ್ತಡಗಳು ಹೆಚ್ಚುತ್ತಿದ್ದು, ಪುಸ್ತಕ ಓದುವುದರಿಂದ ಮನಸ್ಸಿನ ಎಲ್ಲಾ ರೀತಿಯ ಒತ್ತಡ ನಿರ್ವಹಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪುಸ್ತಕ ಓದಿನತ್ತ ಹೆಚ್ಚಿನ ಗಮನ ಹರಿಸಬೇಕೆಂದರು.
ರೂಬಿಕ್ಸ್ ಕ್ಯೂಬ್ ಗ್ರಾಂಡ್ ಮಾಸ್ಟರ್ ಆಫಾನ್ ಕುಟ್ಟಿ ಅಂತರ್ಜಾಲ ವ್ಯಸನ ದಿಂದ ರೂಬಿಕ್ಸ್ ಕ್ಯೂಬ್‌ನ ಇಂದ್ರಜಾಲದತ್ತ ವಿಷಯದ ಕುರಿತು ಮಾತನಾಡಿದರು. ಲೇಖಕ ಡಾ.ವಿರೂಪಾಕ್ಷ ದೇವರಮನೆ, ಒನ್ ಗುಡ್ ಸ್ಟೆಪ್ ಸ್ಥಾಪಕಿ ಮತ್ತು ಟ್ರಸ್ಟಿ ಅಮಿತಾ ಪೈ, ಸಾವಣ್ಣ ಪ್ರಕಾಶನದ ಪ್ರಕಾಶಕ ಜಮೀಲ್ ಸಾವಣ್ಣ ಉಪಸ್ಥಿತರಿದ್ದರು. ಡಾ.ವೀಣಾ ವಿರೂಪಾಕ್ಷ ಸ್ವಾಗತಿಸಿದರು.