‘ಉಡುಪಿ ಕೃಷ್ಣಾಪುರ ಮಠದ ಗುರುಪರಂಪರೆ’ ಕೃತಿ ಬಿಡುಗಡೆ
Update: 2023-10-26 17:34 IST
ಉಡುಪಿ, ಅ.26: ಕೋಟೇಶ್ವರ ಎನ್‌ಆರ್‌ಎಎಂಎಚ್ ಪ್ರಕಾಶನದ ವತಿಯಿಂದ ಉಡುಪಿ ಕೃಷ್ಣಾಪುರ ಮಠದ ಗುರು ಪರಂಪರೆ(ಪರ್ಯಾಯ ಕ್ರಮದ ಪರಿಚಯದೊಂದಿಗೆ) ಕುರಿತ ‘ಕುಸುಮ’ ಕೃತಿಯ ಪರಿಷ್ಕೃತ ಮುದ್ರಣದ ಬಿಡುಗಡೆ ಕಾರ್ಯ ಕ್ರಮವು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಜರಗಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಕೃತಿಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಪ್ರಕಾಶಕರಾದ ಡಾ.ಸಬಿತಾ ಆಚಾರ್ಯ ಮತ್ತು ಡಾ.ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು. ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.