×
Ad

ನಿವೃತ್ತ ಕಸ್ಟಮ್ ಅಧಿಕಾರಿ ಮೃತ್ಯು

Update: 2023-07-17 22:03 IST

ಮಣಿಪಾಲ, ಜು.17: ಮಣಿಪಾಲದ ನರಸಿಂಗೆ ದೇವಸ್ಥಾನದ ಬಳಿ ಒಂಟಿ ಯಾಗಿ ವಾಸವಾಗಿದ್ದ ನಿವೃತ್ತ ಕಸ್ಟಮ್ ಅಧಿಕಾರಿಯೊಬ್ಬರು ಮನೆಯೊಳಗೆ ಮೃತ ಪಟ್ಟಿದ್ದು, ಇವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.

ಮೃತರನ್ನು ಕೊಚ್ಚಿನ್, ಕಾರವಾರದ ಕಸ್ಟಮ್ಸ್‌ನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಪೆರ್ಡೂರು ಗೋಪಾಲ್ ನಾಯಕ್(83) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಇವರು ಮನೆಯಲ್ಲಿ ಒಬ್ಬರೇ ವಾಸಮಾಡಿಕೊಂಡಿದ್ದು, ವಾರದ ಹಿಂದೆಯಷ್ಟೇ ಅವರ ಪುತ್ರಿ ಭೇಟಿ ಮಾಡಿ ತೆರಳಿದ್ದರು ಎನ್ನಲಾಗಿದೆ.

ಈ ಮಧ್ಯೆ ಇವರು ಮೃತಪಟ್ಟಿದ್ದು, ಮೃತದೇಹ ಕೊಳೆತ ಪರಿಣಾಮ ವಾಸನೆ ಬರುತ್ತಿರುವುದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಮೃತರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಮೃತದೇಹವನ್ನು ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News