×
Ad

ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ ಪಾತ್ರ ಮಹತ್ವದ್ದು: ಡಾ.ಗಿರಿಧರ ಕಿಣಿ

Update: 2024-08-22 19:56 IST

ಉಡುಪಿ, ಆ.22: ದೇಶದ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ಜೊತೆ ಜೊತೆಗೆ ಭವಿಷ್ಯದ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಮಣಿಪಾಲ ಮಾಹೆ ವಿವಿಯ ರಿಜಿಸ್ಟ್ರಾರ್ ಡಾ. ಪಿ.ಗಿರಿಧರ್ ಕಿಣಿ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗವು, ಕಾಲೇಜಿನ ಐಕ್ಯೂಎಸಿಯ ಸಹಯೋಗದೊಂದಿಗೆ ಎರಡು ದಿನಗಳ ಕಾಲ ‘ಕೃತಕ ಬುದ್ಧಿಮತ್ತೆ: ಸಿದ್ಧಾಂತದಿಂದ ಪರಿಣಾಮದತ್ತ’ವಿಷಯದ ಕುರಿತು ಹಮ್ಮಿಕೊಂಡ ಅಂತಾ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗುರುವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನೈಸರ್ಗಿಕ ಬುದ್ಧಿಮತ್ತೆಯಿಂದ ನಾವು ಆಧುನಿಕ, ಕೃತಕ ಬುದ್ಧಿಮತ್ತೆಯ ಯುಗಕ್ಕೆ ಸಾಗುತಿದ್ದೇವೆ. ಜಾಗತಿಕ ಸವಾಲನ್ನು ಎದುರಿಸಿ ವ್ಯವಹಾರ, ಶಿಕ್ಷಣ, ಇಂಧನ, ಸಾರಿಗೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯಬೇಕಿದೆ. ಸಾಮಾಜಿಕ, ಆರ್ಥಿಕ ನೆಲೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ನೈತಿಕತೆ ಮುಖ್ಯ ಎಂದು ಅವರು ಹೇಳಿದರು.

ಎಐ ತಜ್ಞ, ಎರಿಕ್ಸನ್ ಗ್ಲೋಬಲ್ ಸಂಸ್ಥೆಯ ಮಾಜಿ ತಜ್ಞ ಜಯರಾಮ್ ಬಿ. ಕೆ. ದಿಕ್ಸೂಚಿ ಭಾಷಣ ಮಾಡಿದರು. ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಚೇರ‌್ಮನ್ ಡಾ. ಮಂಜಯ್ಯ ಡಿ. ಎಚ್.,ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯ ದರ್ಶಿ ಬಿ.ಪಿ.ವರದರಾಯ ಪೈ, ಎಂಜಿಎ ಪ. ಪೂ. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಮಾಲತಿದೇವಿ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಿನ್ಸಿಪಾಲ್ ಡಾ. ದೇವಿದಾಸ್ ಎಸ್. ನಾಯ್ಕ್, ಟಿ.ಮೋಹನ್‌ದಾಸ್ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಟಿ. ರಂಗ ಪೈ, ಐಕ್ಯುಎಸಿ ಸಂಯೋಜಕಿ ಪ್ರೊ. ಶೈಲಜಾ ಎಚ್., ಜ್ಯೋತಿ ಅಲ್ಛೋನ್ಸೊ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೊ. ಅರುಣ್ ಕುಮಾರ್ ಉಪಸ್ಥಿತರಿದ್ದರು.

ಎಂಜಿಎಂ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ. ವಿಶ್ವನಾಥ ಪೈ ಸ್ವಾಗತಿಸಿದರು. ಸುಷ್ಮಾ ಬಂಗೇರ ಯು. ಅತಿಥಿ ಪರಿಚಯ ಮಾಡಿದರು. ರೇಖಾ ಎನ್. ಚಂದ್ರ ಕಾರ್ಯಕ್ರಮ ನಿರೂಪಿಸಿ ಪವಿತ್ರಾ ಕೆ. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News