ಶಿರ್ವ: ಡಿ.29ರಂದು ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ನಲ್ಲಿ ‘ತಿಬ್‌ಯಾನ್–ಬ್ರೈನ್ ರೈನ್ ಎಕ್ಸ್ಪೋ 2025–26’
ಉಡುಪಿ: ಶಿರ್ವದ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ (FIPS) ಆಶ್ರಯದಲ್ಲಿ ‘ತಿಬ್‌ಯಾನ್–ಬ್ರೈನ್ ರೈನ್ ಎಕ್ಸ್ಪೋ 2025–26’ ಕಾರ್ಯಕ್ರಮವು ಡಿ. 29ರಂದು ಶಾಲಾ ಕ್ಯಾಂಪಸ್ನಲ್ಲಿ ನಡೆಯಲಿದೆ.
ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಖಾಲಿದ್ ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎಕ್ಸ್‌ಪರ್ಟೈಸ್ ಸಂಸ್ಥೆಯ ಸಿಒಒ ಕೆ.ಎಸ್. ಶೇಖ್ ಕರ್ನಿರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷ ಎಚ್.ಎಂ. ಅಫ್ರೋಝ್ ಅಸ್ಸಾದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಕರ್ನಾಟಕ ಡೆವಲಪ್ಮೆಂಟ್ ಬೋರ್ಡ್ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಉದ್ಯಾವರದ ಹಲೀಮಾ ಸಾಬ್ಜು ಆಡಿಟೋರಿಯಂ ಮಾಲೀಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಕಾರ್ಕಳದ ಸಿಟಿ ನರ್ಸಿಂಗ್ ಹೋಮ್ ನ ಅಸ್ಥಿ ತಜ್ಞ ವೈದ್ಯ ಡಾ. ರಿಝ್ವಾನ್ ಅಹಮದ್, ಉದ್ಯಮಿ ಹಾಗೂ ಸಮಾಜಸೇವಕ ಮೊಹ್ಸಿನ್ ಹೊನ್ನಾಳ, ಉದ್ಯಮಿ ಅಶ್ರಫ್ ಕೋಡಿಬೆಂಗ್ರೆ, ಉಡುಪಿ ಸಮಾಜಸೇವಕ ಇಕ್ಬಾಲ್ ಮನ್ನಾ ಹಾಗೂ ಫೈಝುಲ್ ಇಸ್ಲಾಂ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಫಿ ಅಹಮದ್ ಖಾಝಿ, ಫಾತಿಮಾ ಅಝ್‌ಬಃ ಪಾಲ್ಗೊಳ್ಳಲಿದ್ದಾರೆ.
FIPS ಉಪಾಧ್ಯಕ್ಷರಾದ ಉಮರ್ ಇಸ್ಮಾಯಿಲ್, ಹಸನಬ್ಬ ಶೇಖ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್, ಜಂಟಿ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಮುಖ್ಯೋಪಾಧ್ಯಾಯಿನಿ ಖೈರುನ್ನಿಸಾ, ಶಾಲಾಪ್ರತಿನಿಧಿ ಮೊಹಮ್ಮದ್ ಯೂನುಸ್, ಕೋಶಾಧಿಕಾರಿ ಪರ್ವೇಝ್ ಸಲೀಮ್, ಅರಬಿಕ್ ದೀನಿಯಾತ್ ವಿಭಾಗದ ಮುಖ್ಯಸ್ಥ ಉಬೈದುರ್ರಹ್ಮಾನ್ ನದ್ವಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಭಾಗವಹಿಸುವಂತೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.