×
Ad

ಕುಂದಾಪುರ | ಟ್ರೈನಿಂಗ್ ಸೆಂಟರ್ ಹಾಲ್ ಉದ್ಘಾಟನೆ

Update: 2025-12-27 16:29 IST

ಕುಂದಾಪುರ, ಡಿ.27: ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ನೂತನ ಟ್ರೈನಿಂಗ್ ಸೆಂಟರ್ ಹಾಲ್ ಅನ್ನು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಲೀಮ್ ಮೂಡಬಿದ್ರೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಪ್ರಾರಂಭದಲ್ಲಿಯೇ ಪಠ್ಯ ಪುಸ್ತಕದ ಜೊತೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತನ್ನ ವಿದ್ಯಾಭ್ಯಾಸದ ನಂತರ ಉದ್ಯೋಗಕ್ಕಾಗಿ ಅಥವಾ ಕಂಪನಿಗಳಲ್ಲಿ ಅಥವಾ ಸ್ವಂತ ಉದ್ಯೋಗ ಮಾಡುವಾಗ ನಾವು ಪಡೆದಂತಹ ತರಬೇತಿ ಉಪಯೋಗ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಕುಂದಾಪುರ ಕಮ್ಯೂನಿಟಿ ಸೆಂಟರ್ ನ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಮೌಲಾನ ಝಮಿರ್ ಅಹ್ಮದ್ ರಶಾದಿ ಕಮ್ಯೂನಿಟಿ ಸೆಂಟರ್ ಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಎನ್ಎನ್ಓ ಟ್ರಸ್ಟ್ ನ ಸದ್ಯಸ್ಯ ಪಜ್ಲು ರಹಿಮಾನ್ ಗಂಗೊಳ್ಳಿ ಮಾತನಾಡಿ, ಪ್ರತಿಯೊಬ್ಬ ಸಮಿತಿಯ ಸದ್ಯಸ್ಯ ತನಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಬಾಯಿಸಿದರೆ ಒಂದು ಸಂಸ್ಥೆ ಮಾದರಿಯಾಗಿರಲು ಸಾಧ್ಯ ಎಂದು ತಿಳಿಸಿದರು.

ಒಕ್ಕೂಟದ ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವಾ ಯಾಹ್ಯ ಮಲ್ಪೆ, ಜನರಿಗೆ ಸರಕಾರದಿಂದ ಸಿಗುವ ಅನುದಾನದ ಬಗ್ಗೆ ವಿವರಿಸಿದರು. ಕೇಂದ್ರ ಸಮಿತಿಯ ಖಜಾಂಚಿ ಪೀರು ಸಾಹೇಬ್ ಉಡುಪಿ, ಟ್ರಸ್ಟ್ ನ ಸದ್ಯಸ್ಯ ಮುಸ್ತಾಕ್ ಅಹ್ಮದ್ ಬೆಳ್ವೆ, ಎನ್.ಎಸ್.ಅಕಾಡೆಮಿ ಅಧ್ಯಕ್ಷ ಮುಹಮ್ಮದ್ ಮೋಹಿಸಿನ್, ಒಕ್ಕೂಟದ ಕುಂದಾಪುರ ಘಟಕದ ಅಧ್ಯಕ್ಷ ಜಮಾಲ್ ಗುಲ್ವಾಡಿ, ಬೈಂದೂರು ಘಟಕದ ಅಧ್ಯಕ್ಷ ಸೈಯದ್‌ ಅಜ್ಮಿಲ್ ಶಿರೂರು, ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಬಿಎಸ್ಎಫ್ ಗಂಗೊಳ್ಳಿ, ಮಮ್ದು ಇಬ್ರಾಹಿಂ, ಹಾರುನ್ ರಶೀದ್ ಸಾಸ್ತಾನ್, ಸದ್ಯಸ್ಯರಾದ ಅಬ್ದುಲ್ ಖಾದರ್ ಮೂಡು ಗೋಪಾಡಿ, ಮನ್ಸೂರ್ ಇಬ್ರಾಹಿಂ, ಅಬೂಬಕ್ಕರ್ ಮಾವಿನಕಟ್ಟೆ, ಅಲ್ತಾಫ್ ಮೂಡುಗೋಪಾಡಿ, ಅನ್ವರ್ ಕಂಡ್ಲೂರು, ಜವಾದ್ ಅಕ್ಬರ್ ಹಂಗಾರಕಟ್ಟೆ, ಮೊಹಮ್ಮದ್ ರಫೀಕ್ ವಂಡ್ಸೆ, ಅಕ್ರಮ್ ಪೀರು ಸಾಹೇಬ್ ಉಪಸ್ಥಿತರಿದ್ದರು.

ಕಮ್ಯೂನಿಟಿ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಉಡುಪಿ ಘಟಕದ ಪ್ರದಾನ ಕಾರ್ಯದರ್ಶಿ ಫಾಝಿಲ್ ಅಹ್ಮದ್ ಆದಿ ಉಡುಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News