×
Ad

ಉಡುಪಿಯಿಂದ ಪ್ರಾರಂಭಗೊಂಡ ಆದಿಯೋಗಿ ರಥದ ಶಿವಯಾತ್ರೆ

Update: 2025-12-07 21:43 IST

ಉಡುಪಿ, ಡಿ.7: ಈಶ ಯೋಗ ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ, ಆದಿಯೋಗಿ ರಥ ಉಡುಪಿಯಿಂದ 70 ದಿನಗಳ ಶಿವಯಾತ್ರೆಯನ್ನು ಆರಂಭಿಸಿದ್ದು, 1,000 ಕಿ.ಮೀ.ಗೂ ಅಧಿಕ ದೂರದ ತೀರ್ಥಯಾತ್ರೆಯನ್ನು ಮಹಾಶಿವರಾತ್ರಿ ಹಬ್ಬಕ್ಕೂ ಮೊದಲು ಫೆ.13ರಂದು, ವೈಭವಯುತ ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಬಳಿ ಇರುವ ಆದಿಯೋಗಿಯ ಬಳಿ ಯಾತ್ರೆ ಪೂರ್ಣಗೊಳ್ಳಲಿದೆ.

ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು 70ದಿನಗಳ ಶಿವಯಾತ್ರೆಗೆ ಚಾಲನೆ ನೀಡಿದರು. ಉಡುಪಿಯಿಂದ ಪ್ರಾರಂಭಗೊಂಡು, ಆದಿಯೋಗಿ ರಥವು ಡಿ.12ರಂದು ಮಂಗಳೂರಿಗೆ ತಲುಪಲಿದ್ದು, ಅಲ್ಲಿಂದ ಪುತ್ತೂರು, ಸುಳ್ಯ, ಮಡಿಕೇರಿ, ಬೆಟ್ಟದಪುರ, ಕೆ.ಆರ್. ನಗರ, ಮೈಸೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಮಾಲೂರು, ರಾಯಕೋಟೆ ಮತ್ತು ಅವಿನಾಶಿ ಸೇರಿದಂತೆ ಪ್ರಮುಖ ಪಟ್ಟಣಗಳ ಮೂಲಕ ಪ್ರಯಾಣಿಸಿ, ಈಶ ಯೋಗ ಕೇಂದ್ರವಿರುವ ವೆಳ್ಳಿಯಂಗಿರಿ ಪರ್ವತದ ತಪ್ಪಲನ್ನು ತಲುಪಲಿದೆ.

ಈ ಪ್ರಯಾಣ ಎಲ್ಲರಿಗೂ ಮುಕ್ತವಾಗಿರಲಿದ್ದು, ಭಾಗವಹಿಸಲು ಇಚ್ಚಿಸುವವರು ಒಂದು ದಿನ, ಹಲವು ದಿನಗಳು ಅಥವಾ ಸಂಪೂರ್ಣ ಅವಧಿಗೆ ಸೇರಬಹುದು. ಯಾತ್ರೆಯ ಯಾವುದೇ ಹಂತದಲ್ಲಿ ಆಸಕ್ತರು ಸೇರಿಕೊಳ್ಳಬಹುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News