×
Ad

ಎಸ್‌ಕೆಪಿಎ ದ.ಕ -ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ

Update: 2023-09-10 19:21 IST

ಉಡುಪಿ, ಸೆ.10: ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ 33ನೇ ವಾರ್ಷಿಕ ಮಹಾಸಭೆ ರವಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರಗಿತು.

ಸಭೆಯನ್ನು ಬಂಟವರ ಯಾನೆ ನಾಡವರ ಸಂಘದ ಉಡುಪಿ ವಲಯದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮಾತನಾಡಿದರು. ಎಸ್‌ಕೆಪಿಎ ದ.ಕ. ಉಡುಪಿ ಜಲ್ಲಾಧ್ಯಕ್ಷ ಆನಂದ ಎನ್.ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಲಹಾ ಸಮಿತಿಯ ಮಾಜಿ ಸಂಚಾಲಕ ವಿಠಲ ಔಟ ಧ್ವಜಾರೋಹಣ ನೆರವೇರಿಸಿದರು.

ಕಲಿಕಾ ಪ್ರೋತ್ಸಾಹ, ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯ ಛಾಯಾಗ್ರಾಹಕರನ್ನು ಗುರುತಿಸು ವಿಕೆ, ವೈದ್ಯಕೀಯ ನೆರವು, ಕ್ರೀಡಾ ಕೂಟದ ಬಹುಮಾನ ವಿತರಣೆ ಹಲವು ಕಾರ್ಯಕ್ರಮಗಳು ಈ ಸಂದರ್ಭ ದಲ್ಲಿ ನಡೆಯಿತು.

ಎಸ್‌ಕೆಪಿ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್, ಎಸ್‌ಕೆಪಿಎ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಲೋಕೇಶ್ ಸುಬ್ರಹ್ಮಣ್ಯ, ಕೋಶಾಧಿಕಾರಿ ನವೀನ್ ರೈ ಪಂಜಳ, ಕರುಣಾಕರ ಕಾನಂಗಿ, ಜಯಕರ ಸುವರ್ಣ, ವಿಲ್ಸನ್ ಗೊನ್ಸಾಲ್ವಿಸ್, ಕೀರ್ತಿ ಮಂಗಳೂರು, ಶ್ರೀಧರ್ ಶೆಟ್ಟಿಗಾರ್, ಜಗನ್ನಾಥ ಶೆಟ್ಟಿ, ಹರೀಶ್ ರಾವ್, ಈಶ್ವರ್ ಕುಂಟಾಡಿ, ಪ್ರಕಾಶ್ ಬ್ರಹ್ಮಾವರ, ಹರೀಶ್ ಕುಂದರ್, ನಾಗೇಶ್ ಟಿ.ಎಸ್, ಜನಾರ್ದನ್ ಕೊಡವೂರು, ವಿನೋದ್ ಕಾಂಚನ್, ಸುನಿಲ್ ಮೂಡುಬಿದ್ರೆ, ದೊಟ್ಟಯ್ಯ ಕುಂದಾಪುರ, ರಮೇಶ್ ಸುರತ್ಕಲ್, ಸುಧಾಕರ್ ಶೋಕೆಸ್, ಅಶೋಕ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ನಿತಿನ್ ಬೆಳುವಾಯಿ ವಂದಿಸಿದರು. ರಾಘವೇಂದ್ರ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News