ವಿಶೇಷ ಕಾರ್ಯಾಚರಣೆ: ಖನಿಜ ಸಾಗಾಟದ 163 ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ
ಉಡುಪಿ, ಜ.15: ಉಡುಪಿ ಜಿಲ್ಲೆಯಲ್ಲಿ ಜ.14ರಂದು ಕಲ್ಲು ಮಣ್ಣು ಜಲ್ಲಿ ಮರಳುಗಳನ್ನು ಸಾಗಿಸುವ ವಾಹನಗಳ ಜಾಗೃತಿ ಮೂಡಿಸುವ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ 832 ವಾಹನಗಳನ್ನು ಪರಿಶೀಲಿಸಲಾಗಿದ್ದು, 182 ವಾಹನಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಅಧಿಕ ಭಾರ ಹಾಗೂ ಇತರೆ ಅಪರಾಧಗಳಿ ಗಾಗಿ 66 ವಾಹನಗಳ ಮೇಲೆ ಸ್ಥಳದಲ್ಲಿ ದಂಡ ಹಾಕಿ 22,500ರೂ. ಹಣ ವಸೂಲಿ ಮಾಡಲಾಗಿದೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಒಂದು ವಾಹನದ ಮೇಲೆ ಪ್ರಕರಣ ದಾಖಲು ಮಾಡಲಾ ಗಿದ್ದು, 27 ವಾಹನಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ(ಜ.8ರಿಂದ ಜ.14ರವರೆಗೆ) ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಕರಪತ್ರ ಹಂಚುವ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ. ಈ ವೇಳೆ ಒಟ್ಟು 1240 ಕರಪತ್ರಗಳನ್ನು ಹಂಚಲಾಗಿದ್ದು, ಈಗಾಗಲೇ 163 ವಾಹನಗಳಿಗೆ ಸ್ಪೀಡ್ ಗವರ್ನರ್‌ನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.