×
Ad

ದಸರಾ ಪ್ರಯುಕ್ತ ಯಶವಂತಪುರ - ಮಡಗಾಂವ್ ಜಂಕ್ಷನ್ ನಡುವೆ ವಿಶೇಷ ರೈಲು ಸಂಚಾರ

Update: 2025-09-11 20:03 IST

ಉಡುಪಿ, ಸೆ.11: ದಸರಾ ಪ್ರಯುಕ್ತ ಪ್ರಯಾಣಿಕರ ವಿಶೇಷ ಬೇಡಿಕೆಗಳನ್ನು ಪರಿಗಣಿಸಿ ಬೆಂಗಳೂರು ಯಶವಂತಪುರ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಕೊಂಕಣ ರೈಲು ಮಾರ್ಗದಲ್ಲಿ ಸೆ.30 ಹಾಗೂ ಅ.1ರಂದು ವಿಶೇಷ ರೈಲೊಂದನ್ನು ಓಡಿಸಲು ನಿರ್ಧರಿಸಲಾಗಿದೆ.

ರೈಲು ನಂ.06249 ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆ.30ರ ಮಂಗಳವಾರ ಅಪರಾಹ್ನ 12:00 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ (ಅ.1) ಮುಂಜಾನೆ 5:30ಕ್ಕೆ ಮಡಗಾಂವ್ ತಲುಪಲಿದೆ.

ಮರು ಪ್ರಯಾಣದಲ್ಲಿ ರೈಲು ನಂ.06250 ಮಡಗಾಂವ್ ಜಂಕ್ಷನ್ - ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.1ರ ಬುಧವಾರ ಮುಂಜಾನೆ 6:30ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಅದೇ ದಿನ ಮಧ್ಯರಾತ್ರಿ 11:40ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು 10 ಸ್ಲೀಪರ್ ಕೋಚ್, ನಾಲ್ಕು ಜನರಲ್ ಕೋಚ್ ಹಾಗೂ ಎರಡು ಎಸ್‌ಎಲ್‌ಆರ್ ಸೇರಿದಂತೆ ಒಟ್ಟು 16 ಕೋಚ್‌ಗಳೊಂದಿಗೆ ಸಂಚರಿಸಲಿದೆ. ರೈಲು ನಂ. 06250ಕ್ಕೆ ಮುಂಗಡ ಬುಕ್ಕಿಂಗ್ ಸೆ.13ರಂದು ಪ್ರಾರಂಭಗೊ ಳ್ಳಲಿದೆ. ಎಲ್ಲಾ ಪ್ರಯಾಣಿಕರ ರಿಸರ್ವೇಷನ್ ಸಿಸ್ಟಮ್ (ಪಿಆರ್‌ಎಸ್), ಇಂಟರ್‌ನೆಟ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್‌ಗಳಲ್ಲಿ ಸೀಟು ಮುಂಗಡ ಬುಕ್ಕಿಂಗ್ ಮಾಡಬಹುದು ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News