×
Ad

ದೀಪಾವಳಿ ಪ್ರಯುಕ್ತ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ

Update: 2025-10-16 21:01 IST

ಉಡುಪಿ, ಅ.16: ಮುಂಬರುವ ದೀಪಾವಳಿ  ಪ್ರಯುಕ್ತ ಪ್ರಯಾಣಿಕರ ನೂಕುನುಗ್ಗಲ್ಲನ್ನು ನಿಭಾಯಿಸುವ ದೃಷ್ಟಿಯಿಂದ ಕೊಂಕಣ ರೈಲು ಮಾರ್ಗದಲ್ಲಿ ಹಲವು ವಿಶೇಷ ರೈಲುಗಳನ್ನು ಒಡಿಸಲು ಕೊಂಕಣ ರೈಲ್ವೆ ಕಾರ್ಪೋರೇಷನ್ ನಿರ್ಧರಿಸಿದೆ.

ರೈಲು ನಂ.07365 ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್- ಮಡಗಾಂವ್ ಜಂಕ್ಷನ್ ವಯಾ ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು, ರೈಲು ನಂ.07366 ಮಡಂಗಾವ್ ಜಂಕ್ಷನ್- ಬೆಂಗಳೂರು ಕಾಂಟೋನ್ಮೆಂಟ್ ವಯಾ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಹಾಗೂ ರೈಲು ನಂ.06205/06206 ಬೆಂಗಳೂರು ಕಂಟೋನ್ಮೆಂಟ್- ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚರಿಸುವ ವಿಶೇಷ ರೈಲುಗಳಾಗಿವೆ.

ರೈಲು ನಂ.07365 ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್- ಮಡಗಾಂವ್ ಜಂಕ್ಷನ್ ವಯಾ ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.17ರ ಶುಕ್ರವಾರ ಮುಂಜಾನೆ 5:15ಕ್ಕೆ ಹುಬ್ಬಳ್ಳಿ ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಮುಂಜಾನೆ 5:30ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.

ಈ ರೈಲಿಗೆ ಹಾವೇರಿ, ದಾವಣಗೆರೆ, ಬೀರೂರು ಜಂಕ್ಷನ್, ಅರಸಿಕೆರೆ ಜಂಕ್ಷನ್, ತುಮಕೂರು, ಯಶವಂತಪುರ ಜಂಕ್ಷನ್, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್, ಅಂಕೋಲ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ರೈಲು ನಂ.07366 ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ವಯಾ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ.18ರ ಶನಿವಾರ ಮುಂಜಾನೆ 6:30ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಅದೇ ದಿನ ಅಧ್ಯರಾತ್ರಿ 11:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.

ಈ ರೈಲಿಗೆ ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚೆನ್ನರಾಯ ಪಟ್ಟಣ, ಕುಣಿಗಲ್, ಚಿಕ್ಕಬಾಣಾವರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲುಗಳು ಒಟ್ಟು 20 ಬೋಗಿಗಳೊಂದಿಗೆ ಸಂಚರಿಸಲಿವೆ. ಇವುಗಳಲ್ಲಿ 2 ಟೂ ಟಯರ್ ಎಸಿ, ಮೂರು ತ್ರಿ ಟಯರ್ ಎಸಿ, 10 ಸ್ಲೀಪರ್ ಕೋಚ್, ಮೂರು ಜನರಲ್ ಕೋಚ್ ಹಾಗೂ ಎರಡು ಎಸ್‌ಎಲ್‌ಆರ್ ಕೋಚ್‌ಗಳಿರುತ್ತದೆ.

ರೈಲು ನಂ.06205 ಬೆಂಗಳೂರು ಕಂಟೋನ್ಮೆಂಟ್- ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.19ರ ರವಿವಾರ ಅಪರಾಹ್ನ 12:00ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಮುಂಜಾನೆ 5:30ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.

ಅದೇ ರೀತಿ ರೈಲು ನಂ.06206 ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.20ರ ಸೋಮವಾರ ಮುಂಜಾನೆ 6:30ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಅದೇ ದಿನ ಮಧ್ಯರಾತ್ರಿ 11:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ. ಈ ಎರಡೂ ರೈಲುಗಳಿಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಚಿಕ್ಕಬಾಣಾವರ, ಕುಣಿಗಲ್, ಚೆನ್ನರಾಯ ಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ ಹಾಗೂ ಕಾರವಾರಗಳಲ್ಲಿ ನಿಲುಗಡೆ ಇರುತ್ತವೆ.

ಈ ರೈಲು 20 ಕೋಚ್‌ಗಳೊಂದಿಗೆ ಸಂಚರಿಸಲಿವೆ. ಇವುಗಳಲ್ಲಿ ಎರಡು ಟೂ ಟಯರ್ ಎಸಿ, ಮೂರು ತ್ರಿ ಟಯರ್ ಎಸಿ, 10 ಸ್ವೀಪರ್ ಕೋಚ್, ಮೂರು ಜನರಲ್ ಹಾಗೂ ಎರಡು ಎಸ್‌ಎಲ್‌ಆರ್ ಕೋಚ್‌ಗಳಿರುತ್ತವೆ.

ಈ ಎಲ್ಲಾ ರೈಲುಗಳ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ರೈಲ್ವೆ ಇಲಾಖೆಯ - www.enquiry.indianrail.gov.in-ನ್ನು ಸಂದರ್ಶಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News