×
Ad

ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ

Update: 2023-08-02 15:38 IST

ಉಡುಪಿ, ಆ.2: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಫಗಳ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ಕಾರ್ಯಾಗಾರವನ್ನು ಇತ್ತೀಚೆಗೆ ಕುಂಜಿಬೆಟ್ಟುವಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಮೋನಿಕಾ ಸೋಲೋಮೋನ್ ಮಾಹಿತಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶ್ರೀಕಾಂತ್ ಹಾಗೂ ಡಾ.ಆದರ್ಶ್ ಕುಡ್ವ ದಂತ ಚಿಕಿತ್ಸೆಯಲ್ಲಿ ಎದುರಾಗುವ ಸವಾಲುಗಳು ಮತ್ತು ಆಧುನಿಕ ಚಿಕಿತ್ಸೆ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಕಸ್ತೂರ್ಬಾ ಆಸ್ಪತ್ರೆಗಳ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ್ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಡಾ.ವಿಜಯೇಂದ್ರ ರಾವ್, ಡಾ. ಗುರುರಾಜ್, ಡಾ.ಮನೋಜ್ ಮ್ಯಾಕ್ಸಿಮ್ ಡಿಲೀಮ್, ಡಾ.ಗಣೇಶ್ ಕಾಮತ್, ಡಾ.ಪ್ರಮೋದ್ ಶೆಟ್ಟಿ, ಕಾರ್ಯಗಾರ ಸಂಯೋಜಕ ಡಾ.ಬೀಸು ನೈಕ ಉಪಸ್ಥಿತರಿದ್ದರು.

ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಫದ ಅಧ್ಯಕ್ಷ ಡಾ.ಸತೀಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಜಗದೀಶ್ ಜೋಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News