×
Ad

ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್‌ನಿಂದ ಶಿಕ್ಷಕರಿಗೆ ಸನ್ಮಾನ

Update: 2023-09-05 20:21 IST

ಮಂಗಳೂರು, ಸೆ.5: ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಮಂಗಳೂರು ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳವಾರ ಸುಲ್ತಾನ್ ಗೊಲ್ಡ್ ಮಂಗಳೂರು ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಸಮೀರ ಅಖ್ತಾರ್, ರುಕ್ಸಾನಾ, ಆಯಿಷಾ ಬಾನು ಕೆ., ಪ್ರಜ್ಞಾ ಕೆ., ಶೋಭಾ, ಮೇರಿ ಡಿಸೋಜ, ದೀಪಾ ನಿತೇಶ್ ರೈ ಅವರನ್ನು ಸುಲ್ತಾನ್ ಸಂಸ್ಥೆಯ ನಿರ್ದೇಶಕಿ ಮೇಹರುನ್ನಿಸಾ ಅಬ್ದುಲ್ ರವೂಫ್ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಶಿಕ್ಷಕರು, ಸುಲ್ತಾನ್ ಚಿನ್ನದ ಅಂಗಡಿಯ ಚಿನ್ನದಂತಹ ಮನಸ್ಸು ಹೊಂದಿರುವ ಸಿಬ್ಬಂದಿಗಳು ಗ್ರಾಹಕರ ಸ್ನೇಹಿಯಾಗಿದ್ದಾರೆ. ಆದುದ ರಿಂದ ಈ ಸಂಸ್ಥೆ ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿ ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸಿದರು.

ಸಂಸ್ಥೆಯ ಜನರಲ್ ಮೆನೇಜರ್ ಉನ್ನಿತ್ತನ್, ರೀಜನಲ್ ಮೆನೇಜರ್ ಸುಮೇಶ್, ಬ್ರಾಂಚ್ ಮೆನೇಜರ್ ಅಬ್ದುಲ್ ಸತ್ತಾರ್, ಅಸಿಸ್ಟೇಂಟ್ ಬ್ರಾಂಚ್ ಮೆನೇಜರ್ ಕೆ.ಮುಸ್ತಫಾ ಕಕ್ಕಿಂಜೆ, ಸೇಲ್ಸ್ ಮೆನೇಜರ್ ಫೈಜಲ್, ಡೈಮಂಡ್ ಇನ್‌ಚಾರ್ಜ್ ಪ್ರಸಾದ್ ಆಚಾರ್ಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News