×
Ad

ಯುವಕ ನಾಪತ್ತೆ

Update: 2023-07-24 20:21 IST

ಕುಂದಾಪುರ, ಜು.24: ಮನೆಯಲ್ಲಿ ಊಟ ಮಾಡಿ ಜು.22ರಂದು ರಾತ್ರಿ ಮಲಗಿದ್ದ ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಮನೆ ಮಂದಿಯೊಂದಿಗೆ ಊಟ ಮಾಡಿ ಮಲಗಿದ್ದ ಸುರೇಶ್, ಜು.23ರಂದು ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಸುರೇಶ್ ಮನೆಯಿಂದ ನಾಪತ್ತೆ ಯಾಗಿರುವುದು ಕಂಡುಬಂದಿದೆ. ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News