×
Ad

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ರಿಗೆ ವರ್ಗಾವಣೆ: ನೂತನ ಡಿಸಿಯಾಗಿ ವಿದ್ಯಾಕುಮಾರಿ

Update: 2023-07-13 11:04 IST

ಕೂರ್ಮಾ ರಾವ್ | ವಿದ್ಯಾಕುಮಾರಿ

ಉಡುಪಿ, ಜು.13: ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ಕೆ. ಅವರನ್ನು ನಿಯೋಜಿಸಲಾಗಿದೆ.

ಮೂಲತಃ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಡಾ.ವಿದ್ಯಾಕುಮಾರಿ ಕೆಎಎಸ್ ಅಧಿಕಾರಿಯಾಗಿದ್ದು, 2021ರಲ್ಲಿ ಐಎಎಸ್‌ಗೆ ಭಡ್ತಿ ಪಡೆದಿದ್ದರು. ಹುದ್ದೆಯ ನಿರೀಕ್ಷೆಯಲ್ಲಿದ್ದ ವಿದ್ಯಾಕುಮಾರಿಯವರನ್ನು ತಕ್ಷಣದಿಂದ ಜಾರಿಯಾಗುವಂತೆ ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

 ವಿದ್ಯಾಕುಮಾರಿಯವರು ಉಡುಪಿಯಲ್ಲಿ ಈ ಹಿಂದೆ ಎರಡು ವರ್ಷಗಳ ಕಾಲ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News