×
Ad

ಉಡುಪಿ | ಅನ್ನಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಪತ್ತೆ: 56 ಕಿಂಟ್ವಾಲ್ ಅಕ್ಕಿ ಸಹಿತ ಆರೋಪಿಯ ಸೆರೆ

Update: 2025-06-11 09:29 IST

ಉಡುಪಿ: ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ಮಾಂಬೆಟ್ಟು ಎಂಬಲ್ಲಿ ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿರುವ ಆರೋಪದಲ್ಲಿ ಓರ್ವನನ್ನು ಹಿರಿಯಡ್ಕ ಪೊಲೀಸರು ಜೂನ್ 10ರಂದು ಬಂಧಿಸಿದ್ದಾರೆ.

 

ವಾಸುದೇವ ಪ್ರಭು(56) ಬಂದಿತ ಆರೋಪಿ. ಈತನಿಗೆ ಸೇರಿದ ಪ್ರಭು ಜನರಲ್ ಸ್ಟೋರ್ ನಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿದ್ದೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯಂತೆ ಆಹಾರ ನಿರೀಕ್ಷಕರು ಮತ್ತು ಹಿರಿಯಡ್ಕ ಪೊಲೀಸರು ದಾಳಿ ಮಾಡಿ, ಒಟ್ಟು 131 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 1,27,880 ರೂ. ಮೌಲ್ಯದ ಒಟ್ಟು 55.60 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News