×
Ad

ಉಡುಪಿ | ಬಿಎಸ್ಸೆನ್ನೆಲ್ ಟವರ್‌ಗೆ ಬ್ಯಾಟರಿ, ಸೋಲಾರ್ ಮಂಜೂರಾತಿ

Update: 2025-12-09 20:40 IST

ಸಾಂದರ್ಭಿಕ ಚಿತ್ರ PC | GROK

ಉಡುಪಿ, ಡಿ.9: ಜಿಲ್ಲೆಯಲ್ಲಿರುವ 71 ಬಿಎಸ್ಸೆನ್ನೆಲ್ ಟವರ್ ಗಳಿಗೆ ಹೊಸದಾಗಿ ಬ್ಯಾಟರಿ ಮಂಜೂರು ಮಾಡಲಾಗಿದೆ. ಈ ಬ್ಯಾಟರಿಗಳನ್ನು 2026ರ ಜನವರಿ ಒಳಗೆ ಸರಬರಾಜು ಮಾಡಲಾಗುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅಲ್ಲದೇ ತಾವು ಮಾಡಿಕೊಂಡ ಮನವಿಯಂತೆ ಜಿಲ್ಲೆಯ 21 ಕಡೆಗಳಲ್ಲಿ ಸೋಲಾರ್ ಸ್ಥಾವರಗಳನ್ನು ಮಂಜೂರು ಮಾಡಲಾಗಿದೆ. ಇದನ್ನು ಮಾರ್ಚ್ 2026ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾಜ್ ಸಿಂದಿಯಾ ಅವರು ತಮಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದೂ ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಉಡುಪಿ ಬಿಎಸ್ಎನ್ಎಲ್ ಕಚೇರಿಯಲ್ಲಿ ಜರುಗಿದ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲೆಗಳಲ್ಲಿರುವ ಟವರ್ ಗಳ ಸಮಸ್ಯೆಯನ್ನು ಸಂಸದರ ಗಮನಕ್ಕೆ ತರಲಾಗಿತ್ತು. ಹೊಸ ಬ್ಯಾಟರಿ ಮತ್ತು ಸೋಲಾರ್ ಸ್ಥಾವರಗಳ ಅಳವಡಿಕೆಯಿಂದ ಬಿ.ಎಸ್.ಎನ್.ಎಲ್ ಗುಣಮಟ್ಟ ಹೆಚ್ಚಲಿದೆ ಎಂದು ಸಂಸದರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News