×
Ad

ಉಡುಪಿ: ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂಗೆ ತಂಗುದಾಣ ಉದ್ಘಾಟನೆ

Update: 2025-02-09 20:03 IST

ಉಡುಪಿ: ನಗರದ ಇಂದ್ರಾಳಿಯಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್‌ಪಾರಂಗೆ ತಂಗುದಾಣವನ್ನು ಇಂದು ಉದ್ಘಾಟಿಸಲಾಯಿತು. ಈ ಮೂಲಕ ಉಡುಪಿಯ ರೈಲು ಬಳಕೆದಾರರಿಗೆ ನಿಲ್ದಾಣದಲ್ಲಿ ಇನ್ನೊಂದು ಸೌಲಭ್ಯವನ್ನು ಒದಗಿಸಲಾಯಿತು.

ಉಡುಪಿಯ ಸೀನಿಯರ್ ಚೇಂಬರ್ ಇಂಟರ್‌ನೇಷನಲ್ ಈ ತಂಗುದಾಣವನ್ನು ನಿರ್ಮಿಸಿದ್ದು, ಶನಿವಾರ ಅದನ್ನು ಚೇಂಬರ್‌ನ ಅಧ್ಯಕ್ಷ ಚಂದ್ರಶೇಖರ್ ಅವರು ಉದ್ಘಾಟಿಸಿ ರೈಲ್ವೆ ಪ್ರಯಾಣಿಕರ ಬಳಕೆಗೆ ಬಿಟ್ಟುಕೊಟ್ಟರು.

ಕೊಂಕಣ ರೈಲ್ವೆಯ ಸೀನಿಯರ್ ಪ್ರಾದೇಶಿಕ ಟ್ರಾಫಿಕ್ ಮ್ಯಾನೇಜರ್ ದಿಲೀಪ್ ಡಿ.ಭಟ್, ಕೊಂಕಣ ರೈಲ್ವೆ ಉಡುಪಿಯ ಹಿರಿಯ ಅಧಿಕಾರಿಗಳು, ಸೀನಿಯರ್ ಚೇಂಬರ್ ಇಂಟರ್‌ನೇಷನಲ್‌ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News