×
Ad

ಉಡುಪಿ: ಇಬ್ಬರು ಮಹಿಳೆಯರ ಸರ ಅಪಹರಣ

Update: 2023-09-19 19:39 IST

ಉಡುಪಿ, ಸೆ.19: ಅಪರಿಚಿತರ ಯುವಕರ ತಂಡವೊಂದು ನಗರದ ಪ್ರತ್ಯೇತ ಕಡೆಗಳಲ್ಲಿ ಇಬ್ಬರು ಮಹಿಳೆಯರ ಸರ ಅಪಹರಿಸಿರುವ ಘಟನೆ ಸೆ.18ರಂದು ಬೆಳಗಿನ ಜಾವ ನಡೆದಿದೆ.

ಕುತ್ಪಾಡಿ ಕೋಟಿ ಚೆನ್ನಯ್ಯ ರಸ್ತೆಯ ಮಮತಾ(38) ಎಂಬವರು ಕರಾವಳಿ ಜಂಕ್ಷನ್‌ನಲ್ಲಿರುವ ರಸ್ತೆ ಬದಿಗೆ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಬನ್ನಂಜೆ ಕಡೆಯಿಂದ ಬೈಕಿನಲ್ಲಿ ಬಂದ 35 ರಿಂದ 40 ವರ್ಷ ಪ್ರಾಯದ ಇಬ್ಬರು ಅಪರಿಚಿತರು, ಮಮತಾ ಅವರ ಕುತ್ತಿಗೆಯಲ್ಲಿದ್ದ 48 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾದರು. ಕಳವಾದ ಸರದ ಮೌಲ್ಯ 300000ರೂ. ಎಂದು ಅಂದಾಜಿಸಲಾಗಿದೆ.

ಅದೇ ರೀತಿ ಬನ್ನಂಜೆ ನಿವಾಸಿ ಗೀತಾ(70) ನಗರದ ಬಿಎಸ್‌ಎನ್‌ಎಲ್ ಕಚೇರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದು, ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ಇಬ್ಬರು ಯುವಕರು ಗೀತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆಯಲು ಯತ್ನಿಸಿದರು.

ಈ ವೇಳೆ ಗೀತಾ ಚಿನ್ನದ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಪರಿಣಾಮ ಚಿನ್ನದ ಸರ ತುಂಡಾಗಿ ಅರ್ಧ ಸರವನ್ನು ದುಷ್ಕರ್ಮಿಗಳು ಸುಲಿಗೆ ಮಾಡಿ ಪರಾರಿಯಾದರು. ಇದರ ಮೌಲ್ಯ 1,00,000ರೂ. ಎಂದು ಅಂದಾಜಿಸ ಲಾಗಿದೆ. ಈ ಎರಡು ಕೃತ್ಯವನ್ನು ಒಂದೇ ತಂಡ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News