ಉಡುಪಿ | ಡಿ.15ರಂದು ಪ್ರಧಾನಮಂತ್ರಿ ರಾ. ಶಿಶಿಕ್ಷು ಮೇಳ
Update: 2025-12-10 21:38 IST
ಉಡುಪಿ, ಡಿ.10: ಉಡುಪಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಶಿಶಿಕ್ಷು ಮೇಳವನ್ನು ಡಿಸೆಂಬರ್ 15ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ.
ಮೇಳದಲ್ಲಿ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. - https://www.apprenticeshipindia.gov.in/candidate-login-ವೆಬ್ಸೈಟ್ ಲಿಂಕ್ ಮೂಲಕ ಹಾಗೂ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿ ನೀಡಲು ಇಚ್ಛಿಸುವ ಕಂಪನಿಗಳು ಹಾಗೂ ಕೈಗಾರಿಕೆಗಳು ಮೇಳದಲ್ಲಿ ಭಾಗವಸಹಿಲು - https://www.apprenticeshipindia.gov.in/establishment-registration- ಲಿಂಕ್ ಮೂಲಕ ಅಥವಾ ಶಿಶಿಕ್ಷು ಮೇಳ ನಡೆಯುವ ದಿನದಂದು ಸಂಸ್ಥೆಯಲ್ಲಿಯೇ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ:9980305173 ಮತ್ತು 9900329668ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.