ಉದ್ಯಾವರ ಎಂಇಟಿ ಶಾಲೆಯ ಕ್ರೀಡೋತ್ಸವ ಸಂಭ್ರಮ
ಉಡುಪಿ, ಡಿ.22: ಉದ್ಯಾವರದ ಎಂಇಟಿ ಇಂಗ್ಲಿಷ್ ಮೀಡಿಯಂ ಶಾಲೆಯ ವತಿಯಿಂದ ಕ್ರೀಡೋತ್ಸವ-2025ನ್ನು ಶನಿವಾರ ಉಡುಪಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಫಲಿತಾಂಶಕ್ಕಿಂತಲೂ ಶಿಸ್ತು ಹಾಗೂ ನಿರಂತರ ಪ್ರಯತ್ನವೇ ಮಹತ್ವದ್ದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಿಲ್ಲತ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್ ಮಾತನಾಡಿ, ಸಮಗ್ರ ಶಿಕ್ಷಣ, ನೈತಿಕ ಮೌಲ್ಯಗಳು ಹಾಗೂ ದೈಹಿಕ ಆರೋಗ್ಯವು ಪ್ರಜ್ಞಾವಂತ ನಾಗರಿಕತೆಯ ಮೂಲ ಸ್ತಂಭಗಳೆಂದು ತಿಳಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ನಾಯಕ್ ಮಾತನಾಡಿದರು.
ಟ್ರಸ್ಟ್ ನ ಸದಸ್ಯರಾದ ಸಬೀಹ್ ಕಾಜಿ, ಮುಹಮ್ಮದ್ ಇಕ್ಬಾಲ್, ಫಯಾಜ್, ಇಕ್ಬಾಲ್ ಶಂಸುದ್ದೀನ್, ಸಮೀರ್ ಪಾರ್ಕಳ, ಶಹನವಾಜ್, ಪಿಟಿಎ ಅಧ್ಯಕ್ಷ ಡಾ.ಫೈಸಲ್ ಹಾಗೂ ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.
ಶಾಲೆಯ ಶೈಕ್ಷಣಿಕ ಮುಖ್ಯಸ್ಥೆ ಡಾ.ಜುನೈದಾ ಸುಲ್ತಾನಾ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುಖಲತಾ ವಂದಿಸಿದರು.
ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು, ಪೋಷಕರು, ಅಜ್ಜ-ಅಜ್ಜಿ ಹಾಗೂ ಹಳೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಹೌಸ್ ಚಾಂಪಿಯನ್ಶಿಪ್ ಟ್ರೋಫಿಯನ್ನು ಮರ್ಕ್ಯುರಿ ಹೌಸ್(ಗ್ರೀನ್ ಹೌಸ್) ತನ್ನದಾಗಿಸಿಕೊಂಡಿತು. ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಚಾಂಪಿಯನ್ ಗಳಾಗಿ ಮುಹಮ್ಮದ್ ಯಾಸೀನ್, ಆಥ್ಮಿ, ರಿಹಾನ್ ಅಲಿ, ಇಫ್ರಾ ಆಯೇಷಾ ಮೂಡಿಬಂದರು. ಅಲೂಮ್ನಿ ಬೆಸ್ಟ್ ಅಥ್ಲೀಟ್ ಆಗಿ ಇಲಾನ್ ನವಾಜ್ ಹಾಗೂ ಬೆಸ್ಟ್ ಪೆರಂಟ್ ಅಥ್ಲೀಟ್ ಆಗಿ ಶಬೀನಾ ಪಾಲೌಕರ್ ಪ್ರಶಸ್ತಿ ಪಡೆದುಕೊಂಡರು.