ವಡಭಾಂಡೇಶ್ವರ: 1.32 ವೆಚ್ಚದ ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Update: 2025-10-11 18:14 IST
ಮಲ್ಪೆ: ಉಡುಪಿ ನಗರಸಭೆ ವಡಭಾಂಡೇಶ್ವರ ವಾರ್ಡಿನಲ್ಲಿ 1.32 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ವಡಭಾಂಡೇಶ್ವರ ವಾರ್ಡಿನ ಸರಸ್ವತಿ ಭಜನಾ ಮಂದಿರ ಬಳಿಯಲ್ಲಿ 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಲ್ಲಿರುವ ಸಮುದಾಯ ಭವನ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ಬೈಲಕೆರೆ ಉದ್ದಿನಹಿತ್ಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದ್ದು, ವಡಭಾಂಡೇಶ್ವರ ವಾರ್ಡಿನ ಅಭಿವೃದ್ಧಿಗೆ ಶಾಸಕನ ನೆಲೆಯಲ್ಲಿ ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಗರಸಭಾ ಸದಸ್ಯರಾದ ಯೋಗೀಶ್ ಸಾಲ್ಯಾನ್, ಸುಂದರ ಕಲ್ಮಾಡಿ, ರಮೇಶ್ ಕಾಂಚನ್, ಮಾಜಿ ಸದಸ್ಯರಾದ ವಿಜಯ ಕುಂದರ್, ಸ್ಥಳೀಯ ಮುಖಂಡರಾದ ಪ್ರದೀಪ್, ಗಿರೀಶ್, ಅಜಿತ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.