×
Ad

ಬೀದರ್: ಪಿಯು ಪರೀಕ್ಷೆಯಲ್ಲಿ ವಿಸ್ಡಂ ಕಾಲೇಜಿಗೆ ಉತ್ತಮ ಫಲಿತಾಂಶ

Update: 2025-04-08 23:18 IST

ಬೀದರ್: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ವಿಸ್ಡಂ ಪದವಿಪೂರ್ವ ವಿಜ್ಞಾನ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ವಿಸ್ಡಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಆಸಿಫುದ್ದಿನ್ ಅವರು ತಿಳಿಸಿದ್ದಾರೆ.

ಹುಮಾ ನಶ್ರಾ ಶೇ.93, ಮೊಹಮ್ಮದ್ ಶಾಕೀರ್ ಶೇ.9೦, ಮುನಾಝ್ಝ ಶಝ್ರೀನ್ ಶೇ.89, ಮುಹಮ್ಮದ್ ಫೈಸಲ್ ಅಹ್ಮದ್  ಶೇ.88, ಸಫಾ ಶಮ್ಸ್ ಶೇ.88, ಅಬ್ಬು ಸುಫಿಯಾನ್ ಶೇ.86 ಅಂಕ ಗಳಿಸಿದ್ದು, 6 ವಿದ್ಯಾರ್ಥಿಗಳು ಅಗ್ರಶ್ರೇಣಿ ಹಾಗೂ 88 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ವಿಸ್ಡಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಆಸಿಫುದ್ದಿನ್, ಕಾರ್ಯದರ್ಶಿ ಮೊಹಮ್ಮದ್ ಸಲಹುದ್ದಿನ್ ಫರ್ಹಾನ್ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಬುಷರಾ ಜಮಾಲ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News