ಯುವಕ ಆತ್ಮಹತ್ಯೆ
Update: 2025-08-06 21:41 IST
ಗಂಗೊಳ್ಳಿ, ಆ.6: ಕುಡಿತದ ಚಟದೊಂದಿಗೆ ವಿಪರೀತ ಸಾಲದಲ್ಲಿ ಮುಳುಗಿದ್ದ ಯುವಕನೊಬ್ಬ, ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮದ್ಯದಲ್ಲಿ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.
ಮೃತ ಯುವಕನನ್ನು ಹೊಸಾಡು ಗ್ರಾಮದ ಕೋಟೆಮಕ್ಕಿಯ ರಜತ್ (28) ಎಂದು ಗುರುತಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.