×
Ad

ಶಿರಸಿ : ಹಾವು ಕಡಿತಕ್ಕೊಳಗಾಗಿ ವಿದ್ಯಾರ್ಥಿ ಮೃತ್ಯು

Update: 2026-06-24 14:36 IST

ಶಿರಸಿ :  ವಿಷಪೂರಿತ ಹಾವು ಕಚ್ಚಿ ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟ  ಘಟನೆ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ನಡೆದಿದೆ.

ಸಹಸ್ರಳ್ಳಿ ನಿವಾಸಿ ಪುಟ್ಟಪ್ಪ ನಾಯ್ಕ ಎಂಬವರ ಪುತ್ರ ಮಿಥುನ್ (12) ಹಾವಿನ ಕಡಿತಕ್ಕೆ ಬಲಿಯಾದ ದುರ್ದೈವಿ.

ಘಟನೆಯಲ್ಲಿ ಮಿಥುನ್ ಸಹೋದರಿ ದೀಕ್ಷಾ ಅವರಿಗೂ ಹಾವು ಕಚ್ಚಿದ್ದು, ಸಕಾಲದಲ್ಲಿ ದೊರೆತ ತುರ್ತು ಚಿಕಿತ್ಸೆಯಿಂದಾಗಿ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ರಾತ್ರಿ ಎಂದಿನಂತೆ ಪೋಷಕರ ಜೊತೆ ಮಲಗಿದ್ದ ಮಕ್ಕಳಿಗೆ ಬೆಳಗಿನ ಜಾವದ ಸುಮಾರಿಗೆ ಹಾವು ಕಚ್ಚಿದೆ. ಮಕ್ಕಳು ಏಕಾಏಕಿ ವಾಂತಿ ಮಾಡಲು ಆರಂಭಿಸಿದಾಗ ಪೋಷಕರು ಎಚ್ಚರಗೊಂಡು ನೋಡಿದ್ದಾರೆ. ಈ ವೇಳೆ ಮನೆಯಿಂದ ಹಾವೊಂದು ಹೊರಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ.

ತಕ್ಷಣವೇ ಪೋಷಕರು ಸ್ಥಳೀಯರ ನೆರವಿನೊಂದಿಗೆ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ತೀವ್ರವಾಗಿ ವಿಷವೇರಿದ್ದರಿಂದ ಮಿಥುನ್ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ದೀಕ್ಷಾ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News