ಹೂವಿನಹಡಗಲಿ | ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಗಾಯತ್ರಿ ಬಾವಿಕಟ್ಟಿಗೆ ಏಳನೇ ಸ್ಥಾನ
ಹೂವಿನಹಡಗಲಿ: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ರಾಜ್ಯದ 31 ಜಿಲ್ಲೆಗಳ 224 ಪ್ರತಿನಿಧಿಗಳ ನಡುವೆ ತೀವ್ರ ಪೈಪೋಟಿ ನೀಡಿ, ಟಾಪ್ 10ರ ಪಟ್ಟಿಯಲ್ಲಿ ಗಾಯತ್ರಿ ಬಾವಿಕಟ್ಟಿ ಏಳನೇ ಸ್ಥಾನ ಗಳಿಸಿದ್ದಾರೆ.
ತಾಲೂಕಿನ ಹೊಳಗುಂದಿಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಾಯತ್ರಿ ಭಾವಿಕಟ್ಟಿ ಅವರ ಈ ಸಾಧನೆಯಿಂದ ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸಂಸದೀಯ ಕಲಾಪಗಳ ವಿಷಯ ಮಂಡನೆ ಹಾಗೂ ಚರ್ಚೆಯಲ್ಲಿ ಅತ್ಯುತ್ತಮ ವಾಕ್ಚಾತುರ್ಯ ಪ್ರದರ್ಶಿಸಿ ಗಮನ ಸೆಳೆದ ಅವರು, ರಾಜ್ಯಮಟ್ಟದಲ್ಲಿ ಜಿಲ್ಲೆಯ ಗೌರವವನ್ನು ಎತ್ತಿಹಿಡಿದಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಪಿ.ರಮೇಶ್, ಯುವ ಸಂಸತ್ತಿನ ಸಂಚಾಲಕ ಹಾಗೂ ಮಾರ್ಗದರ್ಶಕ ಭಾಸ್ಕರ್ ನಂದಿ, ಉಪನ್ಯಾಸಕರಾದ ಕೆ. ಭೋಜರಾಜ, ನೆಪೋಲಿಯನ್, ಡಾ.ಎಂ.ಪಿ.ಎಂ.ಮಂಜುನಾಥ, ಅಶೋಕ್ ಈಡಿಗರ, ನಾಗರಾಜ್ ಎ.ಕೆ. ಸೇರಿದಂತೆ ಇತರರು ಅಭಿನಂದಿಸಿದ್ದಾರೆ.