ಹೂವಿನಹಡಗಲಿ | ಸೋಗಿ ಗ್ರಾಮದಲ್ಲಿ ಸುಗಮ ಸಂಗೀತ ಕಾರ್ಯಕ್ರಮ
ಹೂವಿನಹಡಗಲಿ: ತಾಲೂಕಿನ ಸೋಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದಡಿ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯನಗರದ ಸೀತಾಮಾತೆ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಟ್ರಸ್ಟ್, ಹುಗಲೂರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಶಿವಪ್ಪ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಜಾನಪದ ಕಲಾವಿದರಾದ ಸೋಗಿಯ ಡಾ. ಎಸ್. ಕರಿಬಸಪ್ಪ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈ. ಮಲ್ಲಪ್ಪ ಗವಾಯಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೈಜ ಕಲಾವಿದರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ಕಲಾವಿದರು ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರದಿಂದ ಮಾಶಾಸನ ಪಡೆಯುತ್ತಿರುವ ಕಲಾವಿದರು ಕೇಂದ್ರ ಸರ್ಕಾರದಿಂದಲೂ ಆರ್ಥಿಕ ನೆರವು ಪಡೆಯಲು ಅವಕಾಶವಿದ್ದು, ಅದಕ್ಕೆ ಅಗತ್ಯವಿರುವ ಮಾಹಿತಿ ಹಾಗೂ ಪ್ರಕ್ರಿಯೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಡಿ. ಕೊಟ್ರಪ್ಪ ಹುಗಲೂರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಹಕಲಾವಿದರಾದ ಪಿ. ಅಜ್ಜಪ್ಪ, ಜಿ. ನಿಂಗಪ್ಪ, ಹೊಸಮನಿ ಬಸವರಾಜ, ಕೆ. ಮಹಾಬಲೇಶ್ವರಪ್ಪ, ಡಿ. ಬೆಟ್ಟಪ್ಪ, ಎಂ. ನಿಂಗನಗೌಡ, ಬಿ. ಈಶಪ್ಪ, ಹಾರ್ಮೋನಿಯಂನಲ್ಲಿ ಬಿ. ಕಸ್ತೂರಪ್ಪ ಸೋಗಿ ಹಾಗೂ ತಬಲಾದಲ್ಲಿ ಬಿ. ರುದ್ರಪ್ಪ ಸಹಕರಿಸಿದರು.
ಸೀತಾಮಾತೆ ಜಾನಪದ ಕಲಾ ಟ್ರಸ್ಟ್‌ನ ಅಧಿಕಾರಿ ಮೇಟಿ ನಿಖಿಲ, ಸವಿತಾ, ಟಿ. ದೇವಕ್ಕ, ಸರ್ವಕ್ಕ, ಎಚ್.ಬಿ. ಸರ್ವಮ್ಮ, ಶಿವಮ್ಮ, ಪವಿತ್ರ, ಎಚ್.ಪಿ.ಎ. ಬಸಮ್ಮ ಹಾಗೂ ಎಚ್.ಪಿ. ನಾಗಮ್ಮ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಸಹಕರಿಸಿದರು.