×
Ad

ಹೊಸಪೇಟೆ: ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯಿಂದ ಎಸೆಸೆಲ್ಸಿ, ಪಿಯು ಸಾಧಕರಿಗೆ ಪ್ರತಿಭಾ ಪುರಸ್ಕಾರ

Update: 2024-07-14 14:10 IST

ವಿಜಯ ನಗರ, ಜು.14: ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಕಳೆದ ಸಾಲಿನ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಅಂಜುಮನ್ ಶಾದಿ ಮಹಲ್ ನಲ್ಲಿ ಆಯೋಜಸಲಾಗಿತ್ತು.

ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್.ಎನ್.ಮುಹಮ್ಮದ್ ಇಮಾನ್ ನಿಯಝಿ ಮಾತನಾಡಿ, ವಿದ್ಯಾಬ್ಯಾಸದಿಂದ ಉನ್ನತ ಹುದ್ದೆ ಪಡೆದು ನಾನು ಓದಿದ್ದಕ್ಕೆ ಸಾರ್ಥಕವಾಯಿತು ಎಂದು ಸುಮ್ಮನಿರಬೇಡಿ. ನೀವು ಪಡೆದಿರುವಂತಹ ಹುದ್ದೆಯನ್ನು ಜನಸಾಮಾನ್ಯರ ಒಳಿತಿಗಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ದಾದಾ ಪೀರ್, ಸದ್ದಾಂ, ಡಾ.ದುರ್ವೇಷ ಮೊಹಿದ್ದಿನ್, ಟೈರ್ ಹುಸೇನ್, ಫೈರೋಝ್ ಪೀರ್, ಡಾ.ಹಬೀಬುಲ್ಲ, ವಾಹೀದ್, ಮೊಹ್ಸಿನ್, ಗುಲಾಬ್, ರಿಯಾಝ್, ನಾಸಿರ್, ಖಾದಿರ್ ಮುಂತಾದವರು ವೇದಿಕೆಯಲ್ಲಿದ್ದರು.

ಜಿಲ್ಲೆಯ ವಿವಿಧೆಡೆಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News