ವಿಜಯಪುರ : ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 8,69,149 ಪುರುಷರು, 8,38,768 ಮಹಿಳೆಯರು ಹಾಗೂ 182 ಇತರೆ ಸೇರಿದಂತೆ ಒಟ್ಟು 17,08,099 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯಡಿ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕರಡು ಪಟ್ಟಿ ಪ್ರಕಟಿಸಿದ ನಂತರ ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು ‌

ಅಂತಿಮ ಮತದಾರರ ಪಟ್ಟಿಯನ್ವಯ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 98,548 ಪುರುಷರು, 96,713 ಮಹಿಳೆಯರು ಹಾಗೂ 25 ಇತರೆ ಸೇರಿದಂತೆ ಒಟ್ಟು 1,95,286 ಮತದಾರರಿದ್ದಾರೆ; 27-ದೇವರಹಿಪ್ಪರಗಿ ಕ್ಷೇತ್ರದಲ್ಲಿ 1,04,005 ಪುರುಷರು, 98,626 ಮಹಿಳೆಯರು ಹಾಗೂ 27 ಇತರೆ ಸೇರಿದಂತೆ ಒಟ್ಟು 2,02,658 ಮತದಾರರಿದ್ದಾರೆ; 28-ಬಸವನ ಬಾಗೇವಾಡಿ ಕ್ಷೇತ್ರದಲ್ಲಿ 1,00,822 ಪುರುಷರು, 98,842 ಮಹಿಳೆಯರು ಹಾಗೂ 21 ಇತರೆ ಸೇರಿದಂತೆ ಒಟ್ಟು 1,99,685 ಮತದಾರರಿದ್ದಾರೆ; 29-ಬಬಲೇಶ್ವರ ಕ್ಷೇತ್ರದಲ್ಲಿ 1,03,812 ಪುರುಷರು, 1,00,131 ಮಹಿಳೆಯರು ಹಾಗೂ 9 ಇತರೆ ಸೇರಿದಂತೆ ಒಟ್ಟು 2,03,952 ಮತದಾರರಿದ್ದಾರೆ; 30-ಬಿಜಾಪುರ ನಗರ ಕ್ಷೇತ್ರದಲ್ಲಿ 1,04,158 ಪುರುಷರು, 1,08,869 ಮಹಿಳೆಯರು ಹಾಗೂ 41 ಇತರೆ ಸೇರಿದಂತೆ ಒಟ್ಟು 2,13,068 ಮತದಾರರಿದ್ದಾರೆ; 31-ನಾಗಠಾಣ ಕ್ಷೇತ್ರದಲ್ಲಿ 1,24,682 ಪುರುಷರು, 1,17,855 ಮಹಿಳೆಯರು ಹಾಗೂ 12 ಇತರೆ ಸೇರಿದಂತೆ ಒಟ್ಟು 2,42,549 ಮತದಾರರಿದ್ದಾರೆ; 32-ಇಂಡಿ ಕ್ಷೇತ್ರದಲ್ಲಿ 1,19,019 ಪುರುಷರು, 1,10,438 ಮಹಿಳೆಯರು ಹಾಗೂ 22 ಇತರೆ ಸೇರಿದಂತೆ ಒಟ್ಟು 2,29,479 ಮತದಾರರಿದ್ದಾರೆ; ಮತ್ತು 33-ಸಿಂದಗಿ ಕ್ಷೇತ್ರದಲ್ಲಿ 1,14,103 ಪುರುಷರು, 1,07,294 ಮಹಿಳೆಯರು ಹಾಗೂ 25 ಇತರೆ ಸೇರಿದಂತೆ ಒಟ್ಟು 2,21,422 ಮತದಾರರಿದ್ದಾರೆ. ಈ ಮೂಲಕ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 17,08,099 ಮತದಾರರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor