ವಿಜಯಪುರ: ದುಷ್ಕರ್ಮಿಗಳಿಂದ ಯುವಕನ ಭೀಕರ ಹತ್ಯೆ
ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಿಗ್ಗೆ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಅಲ್ತಾಫ್ ಮನಗೂಳಿ ಎಂದು ಗುರುತಿಸಲಾಗಿದೆ. ಈತ ಕಳ್ಳತನ ಸೇರಿದಂತೆ ಇತರೆ ಪ್ರಕರಣಗಳ ಆರೋಪಿ ಎನ್ನಲಾಗಿದ್ದು, ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಎಂ.ಓ.ಬಿ. ಅಪರಾಧಿ ಆಗಿದ್ದನು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಗಾಂಧಿಚೌಕ್ ಪೊಲೀಸ್ ಠಾಣಾ ಸಿಪಿಐ ಹಾಗೂ ಪಿ.ಎಸ್.ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಘಟನಾ ಸ್ಥಳದಿಂದ ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.