×
Ad

ಶ್ರಾವಣ ಮಾಸದ ಸೌಹಾರ್ದ ಸಂಭ್ರಮದ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ

Update: 2025-08-02 12:39 IST

ವಿಜಯಪುರ: ಶ್ರಾವಣ ಮಾಸದ ಪೂಣ್ಯ ಸಂದರ್ಭದಲ್ಲಿ ಮನಿಯಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಯ್ಯೂಬ್ ಮದನ್ ಸಾಬ್ ಮನಿಯಾರ ರವರ ಹೆತ್ತವರ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ತಾಳಿಕೋಟಿ, ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ಸಮಾಜ ಸೇವಕ ಅಯ್ಯೂಬ್ ಮನಿಯಾರ ರವರು ಅನೇಕ ವರ್ಷಗಳಿಂದ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧವೆಯರಿಗೆ ಮಾಸಿಕ ಪಿಂಚಣಿ, ಈದ್ ಕಿಟ್ ವಿತರಣಾ ಕಾರ್ಯಕ್ರಮ, ಬೀದಿಯವರಿಗಾಗಿ ಆಶ್ರಯ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕಂಪ್ಯೂಟರ್ ತರಬೇತಿ ಇತ್ಯಾದಿ ಸೇವಾ ಚಟುವಟಿಕೆಗಳು ಇವರಿಂದ ನಿರಂತರವಾಗಿ ನಡೆಯುತ್ತಿವೆ.

ಈ ಸೇವೆಯು ಕಳೆದ 12 ವರ್ಷಗಳಿಂದ ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಉಚಿತ ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ಅವರು ತಮ್ಮ ವೈಯಕ್ತಿಕ ಖರ್ಚಿನಿಂದ ನಿರ್ವಹಿಸುತ್ತಿದ್ದಾರೆ.

ಈ ವರ್ಷದ ಶಿಬಿರದ ವಿಶೇಷತೆ:

ಕಣ್ಣಿನ ತಪಾಸಣೆ:

ಅನುಗ್ರಹ ಕಣ್ಣಿನ ಆಸ್ಪತ್ರೆ, ತಾಳಿಕೋಟಿ

️ 09-08-2025 (ಶನಿವಾರ)

⏰ ಬೆಳಿಗ್ಗೆ 8:00 ರಿಂದ ಸಂಜೆ 5:00 ಗಂಟೆವರೆಗೆ

ಕಣ್ಣಿನ ತಪಾಸಣೆ:

ಅನುಗ್ರಹ ಕಣ್ಣಿನ ಆಸ್ಪತ್ರೆ, ಮುದ್ದೇಬಿಹಾಳ

️ 10-08-2025 (ರವಿವಾರ)

⏰ ಬೆಳಿಗ್ಗೆ 8:00 ರಿಂದ ಸಂಜೆ 5:00 ಗಂಟೆವರೆಗೆ

ಶಸ್ತ್ರಚಿಕಿತ್ಸೆ, ಔಷಧ ವಿತರಣೆ:

 11-08-2025 ರಿಂದ 14-08-2025ರವರೆಗೆ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಪ್ರಸಿದ್ಧ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರು ನಡೆಸಲಿದ್ದಾರೆ.  ಶಸ್ತ್ರಚಿಕಿತ್ಸೆಗೆ ಅರ್ಹರಾದ ರೋಗಿಗಳೊಂದಿಗೆ ಒಬ್ಬ ಸಂಬಂಧಿಕರ ಹಾಜರಾತಿ ಕಡ್ಡಾಯ. ಪ್ರಯಾಣ ವೆಚ್ಚ, ಊಟ, ಔಷಧಿ, ಕನ್ನಡಕ ಸಹಿತ ಸಂಪೂರ್ಣ ಉಚಿತ ಸೇವೆ. ಮುದ್ದೇಬಿಹಾಳದ ಬಿದರಕುಂದಿಯಲ್ಲಿರುವ ಅಯ್ಯುಬ ಮನಿಯಾರ ರವರ ಶಾಲಾ ಕಟ್ಟಡದಲ್ಲಿ ಆ.20 ಬುಧವಾರ ಬೆಳಿಗ್ಗೆ 9:00 ಗಂಟೆಗೆ  ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳಿಗೆ ಔಷಧ ವಿತರಣೆ ನಡೆಯಲಿದೆ.

 ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಪ್ರಗತಿಪರ ಚಿಂತಕರು, ರಾಜಕೀಯ ನಾಯಕರು ಮತ್ತು ಸಮಾಜ ಸೇವಕರು ಭಾಗವಹಿಸಲಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ನೋಂದಣಿಗಾಗಿ ಮೊಬೈಲ್‌ ನಂಬರ್‌ 8123277124 (ಅಪ್ತಾಬ್ ಅಹ್ಮದ್.ಅ.ಮನಿಯಾರ್) ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News