×
Ad

ಶಾಸಕ ಯತ್ನಾಳರಿಂದ ನನಗೆ ಜೀವ ಭಯ ಕಾಡುತ್ತಿದೆ: ನ್ಯಾಯವಾದಿ ಸೈಯದ್ ಆಸೀಫುಲ್ಲಾ

Update: 2025-10-29 16:05 IST

ವಿಜಯಪುರ: "ಎರಡು ವರ್ಷಗಳ (2023 ಮೇ 6ರಂದು) ಹಿಂದೆ ವಿಜಯಪುರ ನಗರದಲ್ಲಿ ಹೈದರ್ ನದಾಫ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಕ್ರಮವಾಗಿ ಬಂಧಿಸಿ, ಕಿರುಕುಳ ನೀಡಿದ್ದಾರೆ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಂದ ನನಗೆ ಜೀವಭಯ ಕಾಡುತ್ತಿದೆ" ಎಂದು ನ್ಯಾಯವಾದಿ ಸೈಯದ್ ಆಸೀಫುಲ್ಲಾ ಖಾದ್ರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಆರೋಪಿಗಳು ಪ್ರಭಾವಿಗಳು, ಪೊಲೀಸ್ ಇಲಾಖೆಯ ದೊಡ್ಡ ಹುದ್ದೆಯಲ್ಲಿರುವವರು, ಹೀಗಾಗಿ ನನಗೆ ಜೀವ ಭಯ ಕಾಡುತ್ತಿದೆ, ನಗರ ಶಾಸಕ ಯತ್ನಾಳ್ ಅವರ ಪ್ರೇರಣೆಯಂತೆ ಈ ಅಧಿಕಾರಿಗಳು ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿರಬಹುದು ಎಂಬ ಸಂಶಯ ಕಾಡುತ್ತಿದೆ ಎಂದು ಅವರು ತಿಳಿಸಿದರು.

ಎರಡು ವರ್ಷಗಳ ಹಿಂದೆ ಹೈದರ್ ನದಾಫ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನ್ನನ್ನು ಅಕ್ರಮವಾಗಿ ಬಂಧಿಸಿ, ಕಿರುಕುಳ ನೀಡಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿತ್ತು. ಈ ಬಗ್ಗೆ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದು, ಅದನ್ನು ಪ್ರಶ್ನಿಸಿ ಆರೋಪಿ ಪೊಲೀಸ್ ಅಧಿಕಾರಿಗಳು ಕಲಬುರಗಿ ಹೈಕೋಟ್ ಮೆಟ್ಟಿಲೇರಿದ್ದರು, ಹೈಕೋರ್ಟ್ ಈ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು, ಇದನ್ನು ನಾನು ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಈ ಪ್ರಕರಣದ ವಿಚಾರಣೆ ಕೈಗೊಂಡು ಹೈಕೋರ್ಟ್ ನೀಡಿರುವ ತೀರ್ಪನ್ನು ಅಸಿಂಧುಗೊಳಿಸಿ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಈ ಪ್ರಕರಣದ ಅಡಿಯಲ್ಲಿ ಮಾನವ ಹಕ್ಕುಗಳ ಕರ್ನಾಟಕ ಮಾನವ ಹಕ್ಕುಗಳ ಕಾಯ್ದೆ 2006 ರೂಲ್ಸ್ 6 ಅಸಂವಿಧಾನಿಕ ಎಂದು ಹೇಳಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರಿಂಕೋರ್ಟ್ ಅಸಿಂಧುಗೊಳಿಸಿದೆ ಎಂದು ತಿಳಿಸಿದರು.

ಈ ವಿಷಯದಲ್ಲಿ ನನಗೆ ನ್ಯಾಯ ದೊರಕಿದೆ, ರಾಜಕೀಯ ಪ್ರೇರಿತವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು, ಸತ್ಯಕ್ಕೆ ಸಂದ ಜಯವಾಗಿದೆ ಎಂದ ನ್ಯಾಯವಾದಿ ಸೈಯದ್ ಆಸೀಫುಲ್ಲಾ ಖಾದ್ರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News