Nidgundi | ಬಸ್-ಬೈಕ್ ನಡುವೆ ಢಿಕ್ಕಿ : ಸವಾರರಿಬ್ಬರು ಮೃತ್ಯು
Update: 2025-12-25 20:26 IST
ಸಾಂದರ್ಭಿಕ ಚಿತ್ರ
ನಿಡಗುಂದಿ : ಸಾರಿಗೆ ಬಸ್ ಮತ್ತು ಬೈಕ್ ನಡುವೆ ಢಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಆಲಮಟ್ಟಿ-ಮುದ್ದೇಬಿಹಾಳ ಮುಖ್ಯರಸ್ತೆಯ ತಾಲೂಕಿನ ಮುದ್ದಾಪುರ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಕೊಪ್ಪ ತಾಂಡಾದ ನಿವಾಸಿ ಶಿವಪ್ಪ ರಾಮಪ್ಪ ಲಮಾಣಿ(60), ಬಸರಕೋಡ ಗ್ರಾಮದ ಬಸಪ್ಪ ಸಂಗಪ್ಪ ಸೂಳಿಭಾವಿ(67) ಮೃತರು.
ಸ್ಥಳಕ್ಕೆ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ, ಪಿಎಸ್‌ಐ ಶಿವಾನಂದ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.