×
Ad

ವಿಜಯಪುರ: ಆರ್ ಟಿ ಓ ಅಧಿಕಾರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Update: 2024-03-27 11:36 IST

ವಿಜಯಪುರ: ಬಾಗಲಕೋಟೆ ಜಿಲ್ಲೆ ಜಮಖಂಡಿಯ ಸಹಾಯಕ ಪ್ರಾದೇಶಿಕ ಸಾರಿಗೆ (ಆರ್ ಟಿ ಓ) ಅಧಿಕಾರಿ ಷಣ್ಮುಖಪ್ಪ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ವಿಜಯಪುರದ ಚಾಲುಕ್ಯ ನಗರದಲ್ಲಿ ನಡೆದಿದೆ.

ಲೋಕಾಯುಕ್ತ ಎಸ್ಪಿ ಟಿ ಮಲ್ಲೇಶ ನೇತೃತ್ವದಲ್ಲಿ  ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಷಣ್ಮುಖಪ್ಪ ಅವರ  ವಿಜಯಪುರ ನಗರದಲ್ಲಿರುವ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆದಿದೆ. 

  ಡಿಎಸ್ಪಿ ಸುರೇಶ ರೆಡ್ಡಿ, ಇನ್ಸಪೆಕ್ಟರ್ ಆನಂದ ಠಕ್ಕನ್ನವರ ಹಾಗೂ ಇತರ ಸಿಬ್ಬಂದಿ‌ ದಾಳಿಯಲ್ಲಿ ಭಾಗವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News