iPhone Duo ವರ್ಸಸ್ Samsung Galaxy Z Fold 8: ವ್ಯತ್ಯಾಸವೇನು?; ಇಲ್ಲಿದೆ ವಿವರ…
Photo Credit : X
ಮಡಿಸುವ ಫೋನ್ ಇಷ್ಟಪಡುವವರು iPhone Duo ವಿಶೇಷತೆ ಏನು ಎಂದು ತಿಳಿಯಲು ಕುತೂಹಲ ಹೊಂದಿರುತ್ತಾರೆ. ಆದರೆ iPhone Duo ಇನ್ನೂ ಖರೀದಿಗೆ ಲಭ್ಯವಿಲ್ಲ. ಅಕ್ಟೋಬರ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ.
Apple ಕೊನೆಗೂ ಮಡಚಬಹುದಾದ ಫೋನ್ ತಯಾರಿಸಿದೆ. iPhone 18 ಮತ್ತು iPhone 18 Pro Max ಜೊತೆಗೆ ಮಡಿಸುವ ಫೋನ್ iPhone Duo ಅನ್ನು ಪರಿಚಯಿಸುತ್ತಿದೆ. ಉನ್ನತ ಶ್ರೇಣಿಯ ಬೆಲೆ ಹೊಂದಿರುವ ಉನ್ನತ ಶ್ರೇಣಿಯ ಈ ಫೋನ್ ಭಾರತದಲ್ಲಿ 3 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಇದಕ್ಕೆ ಹೋಲಿಸಿದರೆ Samsung Galaxy Z Fold 8 ಅಗ್ಗವಾಗಿದೆ. ಹಾಗೆ ನೋಡಿದರೆ Samsung Galaxy Z Fold 8 ಕೂಡ ಉನ್ನತ ಶ್ರೇಣಿಯ ಫೋನ್.
ಹೀಗಾಗಿ ಮಡಿಸುವ ಫೋನ್ ಇಷ್ಟಪಡುವವರು iPhone Duo ವಿಶೇಷತೆ ಏನು ಎಂದು ತಿಳಿಯಲು ಕುತೂಹಲ ಹೊಂದಿರುತ್ತಾರೆ. ಆದರೆ iPhone Duo ಇನ್ನೂ ಖರೀದಿಗೆ ಲಭ್ಯವಿಲ್ಲ. ಅಕ್ಟೋಬರ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ. ಆದರೆ Fold 8 ಖರೀದಿಸಲು ಲಭ್ಯವಿದೆ. ಹಾಗಿದ್ದರೆ ನಿರ್ದಿಷ್ಟತೆಗಳು, ಫೀಚರ್ಗಳು ಮತ್ತು ಬೆಲೆಗಳ ವಿಷಯದಲ್ಲಿ ಎರಡನ್ನೂ ಹೋಲಿಸಿ ನೋಡೋಣ.
ವಿನ್ಯಾಸದಲ್ಲಿ ಯಾವುದು ಮೇಲು?
Galaxy Z Fold 8 ರಿಂದ ಪ್ರಾರಂಭಿಸಿದರೆ, ಹೋಲಿಸಿದರೆ Duo ಗಿಂತ ಇದು ಸಾಕಷ್ಟು ಹಗುರವಾಗಿದೆ. Fold 8 ನ ತೂಕ 201 ಗ್ರಾಂ. ಹೀಗಾಗಿ ಸ್ಯಾಮ್ಸಂಗ್ ಇದನ್ನು ವಿಶ್ವದ ಅತ್ಯಂತ ಹಗುರವಾದ ಮಡಿಸುವ ಫೋನ್ ಎಂದು ಕರೆಯುತ್ತದೆ. ಇದನ್ನು ಫ್ಲೆಕ್ಸ್ ಟೈಟಾನಿಯಂ ಚಾಸಿ ಮತ್ತು ಆರ್ಮರ್ ಫ್ಲೆಕ್ಸ್ಹಿಂಜ್ ಜೊತೆಗೆ ನಿರ್ಮಿಸಲಾಗಿದೆ. ಗಮನಾರ್ಹವಾಗಿ ಸ್ಲಿಮ್ ಆಗಿದೆ. ತೆರೆದಾಗ 4.5mm ಮತ್ತು ಮುಚ್ಚಿದಾಗ 9.7mm ಇರುವ ಕಾರಣದಿಂದ ಸ್ಯಾಮ್ಸಂಗ್ ನಿರ್ಮಿಸಿದ ಅತಿ ಸಪಟಾದ ಮಡಿಸುವ ಫೋನ್ ಆಗಿರುತ್ತದೆ. ಕವರ್ ಸ್ಕ್ರೀನ್ 16:10 ಅನುಪಾತದಲ್ಲಿ 5.5 ಇಂಚುಗಳ ಅಳತೆ ಹೊಂದಿದೆ. ಹೀಗಾಗಿ ಸಾಮಾನ್ಯ ಫೋನ್ಗೆ ಬಹಳ ಸಮೀಪದಲ್ಲಿದೆ.
ಇದಕ್ಕೆ ಹೋಲಿಸಿದರೆ Duo ಸ್ವಲ್ಪ ಭಾರವಾಗಿರುತ್ತದೆ. ತೆರೆದಾಗ 254 ಗ್ರಾಂ ತೂಕವಿರುತ್ತದೆ. ಗ್ರೇಡ್ 5 ಟೈಟಾನಿಯಂ ಫ್ರೇಮ್ ಮತ್ತು ಹಿಂಜ್ ಕವರ್ ಬಳಸುತ್ತದೆ. ಮುಂಭಾಗದಲ್ಲಿ ಸಿರಾಮಿಕ್ ಶೀಲ್ಡ್ 2 ಮತ್ತು ಹಿಂಭಾಗದಲ್ಲಿ ಸಿರಾಮಿಕ್ ಶೀಲ್ಡ್ ಹೊಂದಿದೆ. ದೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ Apple ಇದಕ್ಕೆ IP68 ಶ್ರೇಯಾಂಕವನ್ನು ಕೊಟ್ಟಿದೆ. ಇದರ ಹೊರಗಿನ ಡಿಸ್ಪ್ಲೇ 5.4 ಇಂಚುಗಳಷ್ಟು ಕಾಂಪ್ಯಾಕ್ಟ್ ಆಗಿದೆ. ಮುಚ್ಚಿದ Duo ಇನ್ನೂ ನಿಮ್ಮ ಜೇಬಿನಲ್ಲಿರುವ ಸಾಮಾನ್ಯ ಐಫೋನ್ನಂತೆ ಭಾಸವಾಗುವಷ್ಟು ಚಿಕ್ಕದಾಗಿದೆ. ಕೊನೆಯದಾಗಿ ನೀವು ಪಾಕೆಟಬಿಲಿಟಿ ಮತ್ತು ಸ್ಲಿಮ್ನೆಸ್ಗೆ ಆದ್ಯತೆ ನೀಡಿದರೆ ಫೋಲ್ಡ್ 8 ಆರಾಮದಾಯಕ. ಸಾಧನವು ಕೈಗೆ ಗಟ್ಟಿಯಾಗಿ ಮತ್ತು ಬಲಿಷ್ಠವಾದ ಫೀಲ್ ಕೊಡಬೇಕು ಎಂದು ನೀವು ಬಯಸಿದಲ್ಲಿ Duo ನಿಮಗೆ ಚೆನ್ನಾಗಿರಬಹುದು.
ಎರಡೂ ಫೋನ್ಗಳ ಡಿಸ್ಪ್ಲೇ ಹೇಗಿದೆ?
ಎರಡೂ ಸಾಧನಗಳು 7.6 ಇಂಚು ಡಿಸ್ಪ್ಲೇ ಗಾತ್ರ ಹೊಂದಿವೆ. ಆದರೆ ಸಂಪೂರ್ಣ ವಿಭಿನ್ನವಾಗಿ ಅಭಿವೃದ್ಧಿಪಡಿಸಲಾಗಿದೆ. ಸ್ಯಾಮ್ಸಂಗ್ ನ Fold 8 ರ ಒಳಗಿನ ಪರದೆಯನ್ನು 4:3 "content-native" ಆಸ್ಪೆಕ್ಟ್ ಅನುಪಾತದಲ್ಲಿ (ವಿಡಿಯೋ ಅಥವಾ ಚಿತ್ರವನ್ನು ಮೂಲತಃ ಯಾವ ಅಳತೆಯಲ್ಲಿ ರೆಕಾರ್ಡ್ ಮಾಡಲಾಗಿದೆಯೋ, ಅದೇ ಅಳತೆಯ ಅನುಪಾತ) ಮರುರೂಪಿಸಲಾಗಿದೆ. 3,000 ನಿಟ್ಗಳ ಗರಿಷ್ಠ ಬ್ರೈಟ್ನೆಸ್ ಹೊಂದಿರುವ 120Hz QXGA+ ಡೈನಾಮಿಕ್ AMOLED 2X ಪ್ಯಾನೆಲ್ ಇದೆ.
Apple ಚೌಕಾಕಾರದ ಬದಲು ಅಗಲವಾಗಿ ತೆರೆದುಕೊಳ್ಳುತ್ತದೆ. Duo ದ 7.6-ಇಂಚಿನ ಸೂಪರ್ ರೆಟಿನಾ XDR ಒಳಗಿನ ಡಿಸ್ಪ್ಲೇ iPhone 18 ಪ್ರೊ ಮ್ಯಾಕ್ಸ್ನಲ್ಲಿರುವ ಡಿಸ್ಪ್ಲೇಗಿಂತ ಶೇ. 50ರಷ್ಟು ದೊಡ್ಡದಾಗಿದೆ. ಅಲ್ಲದೆ, 3,000 ನಿಟ್ಗಳ ಹೊರಾಂಗಣ ಬ್ರೈಟ್ನೆಸ್ ಹೊಂದಿದೆ. ಯಾವಾಗಲೂ ಆನ್ ಆಗಿರುವ ಬೆಂಬಲದೊಂದಿಗೆ ProMotion ಸುಮಾರು 120Hz ವರೆಗೆ ಇದೆ ಎಂದು Apple ಹೇಳಿದೆ. ಅಂದರೆ ನೀವು ಫೋನ್ ಬಳಸುವಾಗ ಬಹಳ ಮೃದು ಮತ್ತು ವೇಗವಾದ ಫೀಲ್ ಕೊಡುತ್ತದೆ.
ಸಾಮಾನ್ಯ ಫೋನ್ಗಳಲ್ಲಿ ಇದು 60Hz (ಸ್ಕ್ರೀನ್ ಹೊಸಚಿತ್ರಗಳನ್ನು ಸೆಕೆಂಡಿಗೆ 60 ಬಾರಿ ಅಪ್ಡೇಟ್) ಇರುತ್ತದೆ. ಸೆಲ್ಫಿ ಕ್ಯಾಮರಾವನ್ನು ಡಿಸ್ಪ್ಲೇ ಅಡಿಯಲ್ಲಿ ಮರೆಮಾಡುವ ಮೂಲಕ Apple ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಹೀಗಾಗಿ ಸ್ಕ್ರೀನ್ ನಡುವೆ ಅಡ್ಡಿಪಡಿಸುವ ಯಾವುದೇ ಕ್ಯಾಮರಾ ರಂಧ್ರ ಇರುವುದಿಲ್ಲ. ಜೊತೆಗೆ ಸ್ಕ್ರೀನ್ ಮಡಚಿದ ಜಾಗದಲ್ಲಿ ಬೀಳುವ ಗೆರೆಯನ್ನು ಕಣ್ಣಿಗೆ ಕಾಣಿಸದಂತೆ ಗಣನೀಯವಾಗಿ ಕಡಿಮೆ ಮಾಡುವ ನ್ಯಾನೋ ಟೆಕ್ಸ್ಚರ್ ಕೋಟಿಂಗ್ ಸಹ ಇದೆ. Samsung ಕ್ಯಾನ್ವಾಸ್ ಅನ್ನು ಮರುರೂಪಿಸಿದರೆ Apple ಕ್ಯಾಮರಾವನ್ನು ಮರೆಮಾಡಿದೆ ಮತ್ತು ಫೋಲ್ಡ್ ಲೈನ್ ನಯಗೊಳಿಸಿದೆ.
ಎರಡೂ ಫೋನ್ಗಳ ಪ್ರೊಸೆಸರ್ ಹೇಗಿದೆ?
Apple ಸಿಲಿಕಾನ್ ವಿರುದ್ಧ ಕ್ವಾಲ್ಕಾಮ್ ಸಿಲಿಕಾನ್ ಇದೆ. Duo ಸಂಪೂರ್ಣವಾಗಿ Apple ನ ಹೊಸ A20 Pro ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು six-core CPU, seven-core GPU ಮತ್ತು ಒಂದು dual 16-core ನ್ಯೂರಲ್ ಎಂಜಿನ್ನೊಂದಿಗೆ 2 ನ್ಯಾನೋಮೀಟರ್ ಪ್ರೊಸೆಸ್ನಲ್ಲಿ ನಿರ್ಮಿಸಲಾಗಿದೆ. ಹಿಂದಿನ ಜನರೇಶನ್ಗೆ ಹೋಲಿಸಿದರೆ ಶೇ 50ರಷ್ಟು ಹೆಚ್ಚಿನ ಮೆಮೊರಿ ಬ್ಯಾಂಡ್ವಿಡ್ತ್ ಹೊಂದಿದೆ. Apple ಕಸ್ಟಮ್ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಂ ಅನ್ನೂ ಸೇರಿಸಿದೆ. ಬಹುಶಃ ಹೆಚ್ಚುವರಿ ವಿಶಾಲ ಸ್ಕ್ರೀನ್ನಿಂದ ಫೋನ್ನ ಕಾರ್ಯಕ್ಷಮತೆ ಕುಂಠಿತಗೊಳ್ಳುವುದನ್ನು ತಡೆಯಲು ಇದನ್ನು ನಿರ್ಮಿಸಲಾಗಿದೆ.
Fold 8 ಗ್ಯಾಲಕ್ಸಿಗಾಗಿನ ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 8 ಅಲೈಟ್ ಜನ್ ಅಲ್ಲಿ ರನ್ ಮಾಡುತ್ತದೆ. ಬದಲಿಗೆ 16GB ವರೆಗೆ RAM ಮತ್ತು 1TB ವರೆಗೆ ಸಂಗ್ರಹಣೆಯನ್ನು ಜೋಡಿಸಲಾಗಿದೆ. ಎರಡೂ ಚಿಪ್ಗಳು ಆಯಾ ಈಕೋಸಿಸ್ಟಂಗಳ ಮೇಲಿನ ಸ್ತರದಲ್ಲಿ ಕೂರುತ್ತವೆ. ಅಂತಿಮವಾಗಿ ಈ ನಿರ್ಧಾರವು ಯಾವ ಫೋನ್ನ ನಿರ್ದಿಷ್ಟತೆಗಳು ದೊಡ್ಡದಾಗಿದೆ ಎಂಬುದರ ಬದಲಿಗೆ ಪ್ರೊಸೆಸರ್ನಿಂದ ಗರಿಷ್ಠ ಕಾರ್ಯಕ್ಷಮತೆ ಹೊರತೆಗೆಯಲು ನೀವು iOS ಅಥವಾ Android ಗಳಲ್ಲಿ ಯಾವುದನ್ನು ಹೆಚ್ಚು ನಂಬುತ್ತೀರಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.
ಫೋನ್ಗಳ ಕ್ಯಾಮರಾ ಹೇಗಿದೆ?
Duo 48-ಮೆಗಾಪಿಕ್ಸೆಲ್ ಡ್ಯುಯಲ್ ಫ್ಯೂಷನ್ ಸಿಸ್ಟಂ ಅನ್ನು ಬಳಸುತ್ತದೆ. 48 ಮೆಗಾಫಿಕ್ಸೆಲ್ ಫ್ಯೂಷನ್ ಮುಖ್ಯ ಕ್ಯಾಮರಾ ಜೊತೆಗೆ 2x ಆಪ್ಟಿಕಲ್ ಗುಣಮಟ್ಟದ ಜೂಮ್ ಆಗಿ ದ್ವಿಗುಣಗೊಳ್ಳುತ್ತದೆ. ಜೊತೆಗೆ 120 ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ 48 ಮೆಗಾಫಿಕ್ಸೆಲ್ ಫ್ಯೂಷನ್ ಅಲ್ಟ್ರಾ ವೈಡ್! ಆದರೆ ಇದಕ್ಕೆ ಮೀಸಲಾದ ಟೆಲಿಫೋಟೋ ಲೆನ್ಸ್ ಇಲ್ಲ. Apple ಒಂದು ಅದ್ಭುತವಾದ ಕೇವಲ ಮಡಚಬಹುದಾದ ಫೋನ್ಗಳಲ್ಲಿ ಮಾತ್ರ ಸೀಮಿತವಿರುವ ವಿಶೇಷ ಸೌಲಭ್ಯವನ್ನು ನೀಡುತ್ತದೆ. ಅಂದರೆ ಸಾಧನವನ್ನು ಯಾವುದೇ ಆಧಾರವಿಲ್ಲದೆ ಎದ್ದು ನಿಲ್ಲಿಸುವುದು. ಅದರ ಹೊರಗಿನ ಡಿಸ್ಪ್ಲೇಯನ್ನು ವ್ಯೂಫೈಂಡರ್ ತರಹ ಬಳಸಬಹುದು. ಇದರಿಂದ ನೀವು ಮುಂದಿನ ಸಾಮಾನ್ಯ ಕ್ಯಾಮರಾದ ಬದಲಿಗೆ ಅತ್ಯಂತ ಸ್ಪಷ್ಟವಾದ ಹಿಂದಿನ ಮುಖ್ಯ ಕ್ಯಾಮರಾಗಳನ್ನು ಬಳಸಿ ಅತ್ಯುತ್ತಮ ಸೆಲ್ಫಿಗಳನ್ನು ತೆಗೆಯಬಹುದು. Fold 8 ಅಲ್ಟ್ರಾದಲ್ಲಿ ಕಂಡುಬರುವ ವಿಸ್ತಾರವಾದ ಟ್ರಿಪಲ್ ಕ್ಯಾಮರಾ ಸಿಸ್ಟಂ ಅನ್ನು ನೀಡಿಲ್ಲ. ಬದಲಿಗೆ Samsung ಎರಡು 50-ಮೆಗಾಪಿಕ್ಸೆಲ್ ಕ್ಯಾಮರಾಗಳನ್ನು ಮಾತ್ರ ಬಳಸಿದೆ.
ಬ್ಯಾಟರಿ ಯಾವುದರಲ್ಲಿ ಚೆನ್ನಾಗಿದೆ?
ಎರಡೂ ಫೋನ್ಗಳ ಬ್ಯಾಟರಿ ಹೋಲಿಕೆ ಕಷ್ಟವಾಗಲಿದೆ. iPhone Duo ಡ್ಯುಯಲ್ ಬ್ಯಾಟರಿ ಆರ್ಕಿಟೆಕ್ಚರ್ ಬಳಸುತ್ತದೆ. ಸಾಮರ್ಥ್ಯದ ಅಂಕಿ ಅಂಶ ಸಂಪೂರ್ಣವಾಗಿ ಬಿಟ್ಟಿದೆ. Apple ಒಳಗಿನ ಡಿಸ್ಪ್ಲೇ ಬಳಸಿ 31 ಗಂಟೆಗಳವರೆಗೆ ವೀಡಿಯೋ ಪ್ಲೇಬ್ಯಾಕ್ ಅನ್ನು ಮತ್ತು ನೀವು ಹೊರಗಿನ ಪರದೆ ಬಳಸಿದರೆ 44 ಗಂಟೆಗಳವರೆಗೆ ಎಂದು ಹೇಳಿಕೊಳ್ಳುತ್ತದೆ. ವೇಗದ ವೈರ್ಡ್ ಚಾರ್ಜರ್ ಜೊತೆಗೆ 20 ನಿಮಿಷಗಳಲ್ಲಿ ಶೇ 50ರಷ್ಟು ಚಾರ್ಜ್ ಮಾಡಬಹುದು. Fold 8 ನಲ್ಲಿ 45W ವೇಗದ ಚಾರ್ಜಿಂಗ್ ಜೊತೆಗೆ 4,800mAh ಬ್ಯಾಟರಿ ಹೊಂದಿದೆ.
ಬೆಲೆ ಮತ್ತು ಲಭ್ಯತೆ ಹೇಗಿದೆ?
Galaxy Z Fold 8 ನ 12GB/256GB ಮಾಡೆಲ್ 1,79,999 ರೂ.ನಿಂದ ಪ್ರಾರಂಭವಾಗುತ್ತದೆ. 16GB/1TB ಆವೃತ್ತಿಗೆ 2,39,999 ರೂ.ವರೆಗೆ ಏರುತ್ತದೆ. iPhone Duo ಭಾರತದಲ್ಲಿ ಸುಮಾರು 3 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಅಂದರೆ Samsung ನ ಅತ್ಯಂತ ದುಬಾರಿ Fold 8 ಕಾನ್ಫಿಗರೇಶನ್ ಸಹ Duo ಪ್ರಾರಂಭಿಕ ಬೆಲೆಗಿಂತ 60,000 ರೂ. ಅಗ್ಗವಾಗಿದೆ. Duo ದ ಆರಂಬಿಕ ಬೆಲೆ 2,59,999 ರೂ. ಆಗಿದೆ.
ಕೃಪೆ: ಇಂಡಿಯಾ ಟುಡೆ