×
Ad

ಅಡುಗೆ ಎಣ್ಣೆಗಳನ್ನು ಮಿಶ್ರಣ ಮಾಡಿ ಬಳಸುವುದು ಉತ್ತಮವೆ?

Update: 2026-01-18 19:12 IST

photo: Gemini

ಸರಿಯಾದ ಮಿಶ್ರಣದಲ್ಲಿ ಬಳಸಿದರೆ ಅಥವಾ ಎಣ್ಣೆಯನ್ನು ಬದಲಿಸಿ ಬಳಸಿದರೆ ಅವುಗಳ ಲಾಭಗಳು ಸಿಗಲಿವೆ ಮತ್ತು ಸಮತೋಲಿತ ಕೊಬ್ಬು ಸೇವನೆಗೆ ನೆರವಾಗಲಿದೆ.

ಭಾರತೀಯರು ಮನೆಗಳಲ್ಲಿ ವಿಭಿನ್ನ ಅಡುಗೆ ಎಣ್ಣೆಗಳನ್ನು ಬಳಸುತ್ತಾರೆ. ನೆಲಗಡಲೆ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗಳನ್ನು ಬಳಸಲಾಗುತ್ತದೆ. ಇತ್ತ ಹೃದಯದ ಆರೋಗ್ಯದ ಜಾಗೃತಿ ಹೆಚ್ಚಾಗುತ್ತಿರುವಂತೆ ಬಹುತೇಕ ಮಂದಿ ಸೂರ್ಯಕಾಂತಿ ಮತ್ತು ಸಾಸಿವೆ ಎಣ್ಣೆಯನ್ನು ಮಿಶ್ರಮಾಡಿ ಆರೋಗ್ಯಕರ ಸಮತೋಲನ ತರಲು ಪ್ರಯತ್ನಿಸುತ್ತಿದ್ದಾರೆ.

► ಎಣ್ಣೆಗಳನ್ನು ಮಿಶ್ರಮಾಡುವುದು ಸರಿಯೆ?

ಮುಂಬೈಯ ಥಾಣೆಯಲ್ಲಿ ಮುಖ್ಯ ಆಹಾರ ತಜ್ಞರಾಗಿರುವ ಅಮ್ರೀನ್ ಶೇಖ್‌ ಪ್ರಕಾರ ಸರಿಯಾಗಿ ಸಂಯೋಜನೆ ಮಾಡಿದರೆ ಸುರಕ್ಷಿತವಾಗಿರುತ್ತದೆ. “ಸೂರ್ಯಕಾಂತಿ ಹಗುರ ಮತ್ತು ತಟಸ್ಥ. ಸಾಸಿವೆ ವಿಶಿಷ್ಟ ರುಚಿ ಮತ್ತು ನೈಸರ್ಗಿಕ ಸಂಯುಕ್ತಗಳನ್ನು ತರುತ್ತದೆ. ಅವುಗಳನ್ನು ಅತಿಯಾಗಿ ಬಿಸಿ ಮಾಡಿರದೆ ಇದ್ದರೆ ಅಥವಾ ಅನೇಕ ಸಲ ಮರುಬಳಕೆ ಮಾಡದೆ ಇದ್ದರೆ ಬಳಸುವುದರಲ್ಲಿ ತಪ್ಪೇನಿಲ್ಲ.”

“ಎಣ್ಣೆಯನ್ನು ಪದೇಪದೆ ಬಿಸಿ ಮಾಡುವುದರಿಂದ ಆಕ್ಸಿಡೇಟಿವ್ ಹಾನಿ ಸಂಭವಿಸುತ್ತದೆ ಮತ್ತು ಹಾನಿಕರ ಸಂಯುಕ್ತಗಳು ರೂಪುಗೊಳ್ಳುತ್ತವೆ. ಎಣ್ಣೆಯ ಬಿಸಿ ಮಾಡುವ ಸಹಿಷ್ಣುತೆಗಳು ವಿಭಿನ್ನವಾಗಿರುವಾಗ ಇದರ ಅಪಾಯ ಹೆಚ್ಚಿರುತ್ತದೆ. ವಿಭಿನ್ನ ಎಣ್ಣೆಗಳಲ್ಲಿ ಭಿನ್ನವಾದ ಕೊಬ್ಬಿನ ಆಮ್ಲದ ವಿವರಗಳಿರುತ್ತವೆ. ಕೆಲವು ಒಮೆಗಾ 3 ಅಥವಾ ಮೋನೋಸ್ಯಾಚುರೇಟೆಡ್ ಕೊಬ್ಬುಗಳಾಗಿರುತ್ತವೆ. ಸರಿಯಾದ ಮಿಶ್ರಣದಲ್ಲಿ ಬಳಸಿದರೆ ಅಥವಾ ಎಣ್ಣೆಯನ್ನು ಬದಲಿಸಿ ಬಳಸಿದರೆ ಅವುಗಳ ಲಾಭಗಳು ಸಿಗಲಿವೆ ಮತ್ತು ಸಮತೋಲಿತ ಕೊಬ್ಬು ಸೇವನೆಗೆ ನೆರವಾಗಲಿದೆ. ವರ್ಷವಿಡೀ ಒಂದೇ ಎಣ್ಣೆಯ ಮೇಲೆ ಅವಲಂಬಿತವಾಗುವ ಬದಲಾಗಿ ಎಣ್ಣೆಗಳನ್ನು ಬದಲಿಸುವುದು ಚಯಾಪಚಯ ಆರೋಗ್ಯ ಮತ್ತು ಹೃದಯದ ಆರೋಗ್ಯಕ್ಕೆ ನೆರವಾಗಲಿದೆ” ಎನ್ನುತ್ತಾರೆ.

►ಎಲ್ಲಾ ರೀತಿಯ ಮಿಶ್ರಣ ಸರಿಯೆ?

ವೈದ್ಯರ ಪ್ರಕಾರ, ಎಲ್ಲಾ ಮಿಶ್ರಣಗಳು ಎಲ್ಲಾ ಅಡುಗೆ ವಿಧಾನಗಳಿಗೆ ಸೂಕ್ತವಲ್ಲ. ಹೆಚ್ಚಿನ ಉಷ್ಣತೆಯ ಅಡುಗೆಗಾಗಿ ಅತಿ ವಿಭಿನ್ನವಾಗಿರುವ ಸ್ಮೋಕ್ ಪಾಯಿಂಟ್‌ಗಳಿರುವ ಎಣ್ಣೆಗಳನ್ನು ಮಿಶ್ರ ಮಾಡುವುದನ್ನು ತಪ್ಪಿಸಬೇಕು. ಆಳವಾಗಿ ಹುರಿಯಲು ಸಂಸ್ಕರಿಸಿದ ಅಥವಾ ಸಂಸ್ಕರಿಸದ ಎಣ್ಣೆಗಳನ್ನು ಮಿಶ್ರಮಾಡಿ ಬಳಸುವುದರಿಂದ ಅವು ವೇಗವಾಗಿ ಒಡೆಯಬಹುದು. ಮಿಶ್ರ ಮಾಡಿದ ಎಣ್ಣೆಗಳನ್ನು ಅಗತ್ಯಕ್ಕಿಂತ ಹೆಚ್ಚು ಬಿಸಿ ಮಾಡುವುದು ಅಥವಾ ಮರು ಬಿಸಿ ಮಾಡುವುದು ಮಾಡಬಾರದು. ಹಾಗೆ ಮಾಡಿದರೆ ಜೀರ್ಣಾಂಗ ವ್ಯೂಹದಲ್ಲಿ ಉರಿಯೂತ ತರುವ ಸಂಯುಕ್ತಗಳನ್ನು ರೂಪಿಸಬಹುದು. ಅವು ದೀರ್ಘಕಾಲೀನ ಹೃದಯದ ಆರೋಗ್ಯಕ್ಕೆ ಸೂಕ್ತವಲ್ಲ. ತಾಪಮಾನವು ನಿರಂತರವಾಗಿ ಹೆಚ್ಚಿರುವ ಆಳವಾಗಿ ಹುರಿಯುವ ಸಂದರ್ಭದಲ್ಲಿ ಬಳಸುವ ಎಣ್ಣೆಗಳಿಗೆ ಇವು ಅನ್ವಯಿಸುತ್ತದೆ.

► ಎಣ್ಣೆ ಬದಲಿಸುವ ಬದಲು ಮಿಶ್ರ ಮಾಡುವುದು ಒಳಿತೆ?

ಇದು ಸಾಮಾನ್ಯವಾಗಿ ಎದುರಿಸುವ ಗೊಂದಲ. ವೈದ್ಯರ ಪ್ರಕಾರ ಮಿಶ್ರಮಾಡಿ ಎಣ್ಣೆ ಬಳಸುವುದು ಅನುಕೂಲಕರ. ಹಾಗೆಯೇ ಬದಲಿಸಿ ಬಳಸುವುದೂ ಉತ್ತಮ. ದೇಹಕ್ಕೆ ವಿವಿಧ ಕೊಬ್ಬು ಮತ್ತು ಪೌಷ್ಠಿಕಾಂಶ ಕೊಡಬೇಕು ಎನ್ನುವುದು ಗುರಿಯಾಗಬೇಕು. ಉದಾಹರಣೆಗೆ ಸಾಸಿವೆ ಎಣ್ಣೆಯನ್ನು ಉಪ್ಪಿನಕಾಯಿಗೆ ಬಳಸಬಹುದು. ಸೂರ್ಯಾಕಾಂತಿ ಎಣ್ಣೆಯನ್ನು ಅಥವಾ ರೈಸ್‌ ಬಾರ್ನ್ ಎಣ್ಣೆಯನ್ನು ದಿನನಿತ್ಯದ ಅಡುಗೆಗೆ ಬಳಸಬಹುದು. ನೆಲಗಡಲೆ ಎಣ್ಣೆಯನ್ನು ಆಳವಾಗಿ ಹುರಿಯಲು ಬಳಸಬಹುದು. ಆಲಿವ್ ಎಣ್ಣೆಯನ್ನು ಸಲಾಡ್‌ಗಳು ಅಥವಾ ಕಡಿಮೆ ಕುದಿಸುವ ಕಡೆ ಬಳಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News