×
Ad

ಕೊರಿಯದ ಜನರಂತೆ 3-3-3 ಶೈಲಿಯಲ್ಲಿ ಹಲ್ಲುಜ್ಜುವುದು ಅಗತ್ಯವೆ? ವೈದ್ಯರು ಏನು ಹೇಳುತ್ತಾರೆ?

Update: 2026-01-18 17:54 IST

photo:AI generated

ಜಾಗರೂಕವಾಗಿ ಹಲ್ಲುಜ್ಜುವುದು ಅಥವಾ ನಿಯಮಿತವಾಗಿ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯ ಗುರಿಯಾಗಿರಬೇಕು.

ಕೊರಿಯನ್ನರು ಆರೋಗ್ಯಕಾರಿ ಆಹಾರ ಮತ್ತು ಜೀವನಕ್ಕೆ ಸುಪ್ರಸಿದ್ಧರು. ಪ್ರೊಬಯಾಟಿಕ್ಸ್ ಸಮೃದ್ಧವಾಗಿರುವ ಆಹಾರ ಸೇವನೆಯಲ್ಲಿ ಪ್ರಸಿದ್ಧಿ ಪಡೆದಿದೆ. ನಗರಗಳಲ್ಲಿ ವಾಕಿಂಗ್ ಲೇನ್‌ಗಳನ್ನು ಮಾಡಿ ನಡಿಗೆಗೆ ಪ್ರೋತ್ಸಾಹ ಕೊಡಲಾಗುತ್ತದೆ. ಚರ್ಮದ ಆರೈಕೆಯಲ್ಲಿನ ತಾಂತ್ರಿಕ ಪ್ರಗತಿಗೂ ಖ್ಯಾತಿಗಳಿಸಿದೆ. ಇದೀಗ ಕೊರಿಯಾದ ದಂತ ಆರೋಗ್ಯದ 3-3-3 ನಿಯಮವೂ ವೈರಲ್ ಆಗಿದೆ.

► ಏನಿದು ಹಲ್ಲುಜ್ಜುವ 3-3-3 ನಿಯಮ?

3-3-3 ನಿಯಮದ ಪ್ರಕಾರ, ನೀವು ದಿನಕ್ಕೆ ಮೂರು ಬಾರಿ ಬ್ರಷ್ ಮಾಡಬೇಕು. ಪ್ರತಿ ಬಾರಿ ಮೂರು ನಿಮಿಷ ಹಲ್ಲುಜ್ಜಬೇಕು. ಮುಖ್ಯವಾಗಿ ಆಹಾರ ಸೇವನೆಯ ಮೂರು ನಿಮಿಷಗಳ ನಂತರ ಹಲ್ಲುಜ್ಜಬೇಕು. ಹಾಗೆಯೇ ನಿಮ್ಮ ಟೂತ್‌ಬ್ರಷ್ ಅನ್ನು ಪ್ರತಿ 3 ತಿಂಗಳಿಗೊಮ್ಮೆ ಬದಲಿಸುವುದೂ ಸೇರಿದೆ. ಹಾಗಿದ್ದರೆ ಈ 3-3-3 ಅತಿಯಾದ ಹಲ್ಲುಜ್ಜುವುದು ಆಗುತ್ತಿದೆಯೇ ಅಥವಾ ಉತ್ತಮ ಕೌಶಲ್ಯವೆ?

ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರಾದ ಡಾ ಸಾಕ್ಷಿ ಹಿಂದೂಜಾ ಅಭಿಪ್ರಾಯಪಡುವ ಪ್ರಕಾರ, ಇದು ಉತ್ತಮ ಮಾರ್ಗದರ್ಶನ. ಆದರೆ ಅತಿ ನಿಯಮಿತವಾಗಿ ಬಳಸುವುದು ಗೋಜಲಿನ ವಿಷಯವಾಗಲಿದೆ.

► 3 ನಿಮಿಷಗಳ ಕಾಲ ಹಲ್ಲುಜ್ಜುವುದು ನಿಮಗೆ ಅಗತ್ಯವೆ?

ವೈದ್ಯರ ಪ್ರಕಾರ, ಸೂಕ್ತ ರೀತಿಯಲ್ಲಿ ಹಲ್ಲುಜ್ಜುವುದು ಅಗತ್ಯವಾಗಿರುತ್ತದೆ. ಹಲ್ಲುಜ್ಜುವುದರಿಂದ ಆಹಾರ ಕಣಗಳು, ಹಲ್ಲಿನ ಮೇಲಿನ ಲೋಳೆಯ ನಿಕ್ಷೇಪಗಳು, ಹಲ್ಲು ಕುಳಿಗಳು ಮತ್ತು ಒಸಡುಗಳ ಸಮಸ್ಯೆ ತರುವ ಬ್ಯಾಕ್ಟೀರಿಯಗಳನ್ನು ತೊಡೆದು ಹಾಕಬಹುದು. ಹೀಗಾಗಿ ಮೂರು ನಿಮಿಷ ಹಲ್ಲುಜ್ಜುವುದು ಉತ್ತಮ.

► ಆಹಾರದ 3 ನಿಮಿಷದ ನಂತರ ಉಜ್ಜುವುದು?

ಊಟದ ನಂತರ ಹಲ್ಲುಜ್ಜುವ ನಿಯಮ ಆಹಾರಗಳು ಮತ್ತು ಪಾನೀಯಗಳಿಂದ ಆಮ್ಲದ ಹಾನಿಯನ್ನು ತಡೆಯಲು ನೆರವಾಗುತ್ತದೆ. ಆದರೆ ಲಿಂಬೆ ಅಥವಾ ಸೋಡಾದಂತಹ ಆಮ್ಲೀಯ ಆಹಾರ ಸೇವಿಸಿದ ತಕ್ಷಣ ಹಲ್ಲುಜ್ಜುವುದರಿಂದ ದಂತಕವಚಕ್ಕೆ ಹಾನಿಯಾಗುತ್ತದೆ. ಹೀಗಾಗಿ 20-30 ನಿಮಿಷ ಕಾದು ಹಲ್ಲುಜ್ಜುವುದು ಸುರಕ್ಷಿತ.

ಹಲ್ಲುಜ್ಜುವ ಸಮಯ ಅಥವಾ ಉದ್ದ ಮುಖ್ಯವಾಗುವುದಿಲ್ಲ. ಸರಿಯಾಗಿ ಎಲ್ಲಾ ಹಲ್ಲುಗಳನ್ನೂ ಉಜ್ಜಿರುವುದು ಮುಖ್ಯ. ನಿಧಾನವಾಗಿ ವೃತ್ತಾಕಾರವಾಗಿ ಹೆಚ್ಚು ಒತ್ತದೆ ಹಲ್ಲುಜ್ಜಬೇಕು” ಎನ್ನುತ್ತಾರೆ ವೈದ್ಯರು. ಅವರ ಪ್ರಕಾರ, ಪೂರ್ಣ ಹಲ್ಲಿನ ಆರೋಗ್ಯಕ್ಕೆ ಫ್ಲ್ಯೂರೈಡ್ ಟೂತ್‌ಪೇಸ್ಟ್ ಬಳಕೆ ಮತ್ತು ಫ್ಲಾಸಿಂಗ್ (ಫ್ಲಾಸರ್ ಬಳಸಿ ಉಜ್ಜುವುದು) ಮುಖ್ಯವಾಗುತ್ತದೆ.

► 3 ತಿಂಗಳಿಗೊಮ್ಮೆ ಟೂತ್‌ಬ್ರಷ್ ಬದಲಿಸಬೇಕೆ?

ವೈದ್ಯರ ಪ್ರಕಾರ, ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಮಾತ್ರವಲ್ಲ, ಟೂತ್‌ಪೇಸ್ಟ್ ಅನ್ನೂ ಬದಲಿಸಬೇಕು. ಇಲ್ಲದಿದ್ದರೆ ಅವುಗಳಲ್ಲಿ ಬ್ಯಾಕ್ಟೀರಿಯಗಳು ತುಂಬಿಕೊಂಡಿರುವ ಸಾಧ್ಯತೆ ಇರುತ್ತದೆ.

► ದಿನಕ್ಕೆ ಮೂರು ಬಾರಿ ಹಲ್ಲುಜ್ಜುವ ಅಗತ್ಯವಿದೆಯೆ?

ಬಹುತೇಕರಿಗೆ ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಹಲ್ಲುಜ್ಜಿದರೆ ಸಾಕಾಗುತ್ತದೆ. 3-3-3 ನಿಯಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ, ಆದರೆ ವಿವರಿಸಿದ ರೀತಿಯಲ್ಲಿಯೇ ಹಲ್ಲುಜ್ಜುವ ಅಗತ್ಯವಿರುವುದಿಲ್ಲ. ಕೆಲವೊಮ್ಮೆ ಇದು ಅತಿಯಾಗಿ ಉಜ್ಜುವುದು ಆಗಬಹುದು.

ಪುಣೆಯ ಮಕ್ಕಳ ದಂತವೈದ್ಯರು ಹೇಳುವ ಪ್ರಕಾರ ಸಂಪೂರ್ಣ ಬಾಯಿ ಆರೋಗ್ಯ ಹಲ್ಲುಜ್ಜುವುದನ್ನು ಮೀರಿ ಇರುತ್ತದೆ. ಹಲ್ಲುಜ್ಜುವುದರಿಂದ ಒಸಡುಗಳು ಮತ್ತು ಹಲ್ಲುಗಳ ಮೇಲ್ಮೈಯನ್ನು ಸ್ವಚ್ಛಗೊಳಿಸುತ್ತದೆ. ಆದರೆ ಹಲ್ಲುಗಳ ನಡುವಿನ ಸ್ಥಳಗಳಿಗೆ ಬ್ರಷ್ ತಲುಪುವುದಿಲ್ಲ. ಬಾಯಿಯ ಹಿಂಭಾಗದಲ್ಲಿ ಮತ್ತು ನಾಲಗೆಯಲ್ಲೂ ಬ್ಯಾಕ್ಟೀರಿಯಗಳು ಬೆಳೆಯಬಹುದು.

ಫ್ಲಾಸರ್‌ಗಳನ್ನು ಬಳಸಿ ಲೋಳೆಗಳು ಮತ್ತು ಆಹಾರದ ಕಣಗಳನ್ನು ಹಲ್ಲಿನ ಮಧ್ಯೆಯಿಂದ ತೊಡೆಯಬಹುದು. ಹೆಚ್ಚು ನೀರುಕುಡಿಯುವುದು ಅಥವಾ ಜಲಸಂಚಯನದಿಂದ ಬ್ಯಾಕ್ಟೀರಿಯಗಳನ್ನು ತೆಗೆದು ಹಾಕಬಹುದು. ನಾಲಗೆಯನ್ನೂ ನಯವಾಗಿ ಬ್ರಷ್ ಮಾಡುವುದು ಉತ್ತಮ. ಜಾಗರೂಕವಾಗಿ ಹಲ್ಲುಜ್ಜುವುದು ಅಥವಾ ನಿಯಮಿತವಾಗಿ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯ ಗುರಿಯಾಗಿರಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News