ಸಾಂದರ್ಭಿಕ ಚಿತ್ರ

ಕೀಟಗಳನ್ನು ತಿನ್ನುವ ಅನೇಕ ಬಾವಲಿಗಳಿಗಿಂತ ಭಿನ್ನವಾಗಿ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಪ್ರಾಥಮಿಕವಾಗಿ ಹಣ್ಣು ತಿನ್ನುವ ಬಾವಲಿಯಾಗಿ ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಭಾರತದ ಅತಿದೊಡ್ಡ ಬಾವಲಿಗಳ ಪ್ರಭೇದಗಳಲ್ಲಿ ಒಂದಾಗಿದೆ. ನರಿಯಂತಹ ಮುಖ, ಅಗಲವಾದ ರೆಕ್ಕೆಗಳು ಮತ್ತು ಮರಗಳಲ್ಲಿ ತಲೆಕೆಳಗಾಗಿ ನೇತಾಡುವ ಅಭ್ಯಾಸದಿಂದಾಗಿ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಎನ್ನುವ ಹೆಸರು ಬಂದಿದೆ.

ಕೀಟಗಳನ್ನು ತಿನ್ನುವ ಅನೇಕ ಬಾವಲಿಗಳಿಗಿಂತ ಭಿನ್ನವಾಗಿ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಪ್ರಾಥಮಿಕವಾಗಿ ಹಣ್ಣು ತಿನ್ನುವ ಬಾವಲಿಯಾಗಿ ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವನ್ಯಜೀವಿ ಫೋಟೋಗ್ರಾಫರ್ ಮತ್ತು ಸಂರಕ್ಷಣಾ ತಜ್ಞ ಇಂದ್ರಜಿತ್ ಘೋರ್ಪಡೆ ಪ್ರಕಾರ ಜನರು ಈ ಬಾವಲಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಬೀಜ ಪ್ರಸರಣದಲ್ಲಿ ಉಪಯುಕ್ತ

ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಅತಿದೊಡ್ಡ ಬಾವಲಿಯ ಪ್ರಭೇದವಾಗಿದ್ದು, ಬೀಜ ಪ್ರಸರಣದಲ್ಲಿ ಬಹಳ ಉಪಯುಕ್ತವಾಗಿದೆ. ಬಾವಲಿಗಳು ಹಣ್ಣುಗಳನ್ನು ತಿನ್ನುವುದರಿಂದ ಬೀಜಗಳನ್ನು ಗಣನೀಯ ದೂರಕ್ಕೆ ಸಾಗಿಸಬಹುದು ಮತ್ತು ಹರಡಬಹುದು. ಹೀಗಾಗಿ ಸಸ್ಯವರ್ಗದ ಪುನರುತ್ಪಾದನೆ ಮತ್ತು ಹರಡುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಫ್ಲೈಯಿಂಗ್ ಫಾಕ್ಸ್ ಎಂದು ಏಕೆ ಕರೆಯಲಾಗುತ್ತದೆ?

ಪ್ರಾಣಿಯ ವಿಶಿಷ್ಟ ಆಕಾರದಿಂದ ಈ ಹೆಸರು ಬಂದಿದೆ. “ನರಿಗಳಂತೆ ಕಿವಿಗಳು ಇರುವ ಕಾರಣದಿಂದ ಹಾರುವ ನರಿ (ಫ್ಲೈಯಿಂಗ್ ಫಾಕ್ಸ್) ಎನ್ನುವ ಹೆಸರು ಬಂದಿದೆ. ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಗಳಿಗೆ ನರಿಗಳಂತೆ ಮುಖವಿರುತ್ತದೆ. ಇತರ ಬಾವಲಿಗಳಿ ಹೋಲಿಸಿದಲ್ಲಿ ದೊಡ್ಡ ಕಣ್ಣುಗಳು ಮತ್ತು ಮೊನಚಾದ ಕಿವಿಗಳನ್ನು ಹೊಂದಿರುತ್ತವೆ. ಹೀಗಾಗಿ ಚಿರಪರಿಚಿತವಾಗಿರುವ ಸಣ್ಣ ಕೀಟ ತಿನ್ನುವ ಬಾವಲಿಗಳಿಗಿಂತ ಭಿನ್ನವಾಗಿರುತ್ತವೆ.

ಕೀಟದ ಬದಲು ಹಣ್ಣು ತಿನ್ನುವ ಬಾವಲಿ

ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಮತ್ತು ಇತರ ಅನೇಕ ಬಾವಲಿಗಳ ನಡುವಿನ ಅತ್ಯಂತ ಗಮನಾರ್ಹ ವ್ಯತ್ಯಾಸವೆಂದರೆ ಅದರ ಆಹಾರ ಕ್ರಮ. “ತೋಟಗಾರಿಕಾ ಬೆಳೆಗಳು ಮತ್ತು ಹಣ್ಣುಗಳನ್ನು ಮಾತ್ರ ತಿನ್ನುವ ಕಾರಣಕ್ಕೆ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಇತರ ಬಾವಲಿಗಳಿಗಿಂತ ವಿಶಿಷ್ಟವಾಗಿವೆ. ಹೀಗಾಗಿ ತೋಟದ ಮಾಲೀಕರ ಜೊತೆಗೆ ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಬಹುದು” ಎನ್ನುತ್ತಾರೆ ಇಂದ್ರಜಿತ್.

ರಾತ್ರಿಯಲ್ಲಿ ಏಕೆ ಸಕ್ರಿಯವಾಗಿರುತ್ತವೆ?

ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಸಂಜೆಯಲ್ಲಿ ಆಹಾರಕ್ಕಾಗಿ ಹಾರುತ್ತವೆ ಮತ್ತು ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತವೆ. ಹಗಲಿನಲ್ಲಿ ತಲೆಕೆಳಗಾಗಿ ನೇತಾಡುತ್ತಾ ಮಲಗುತ್ತವೆ. ಕೊಂಬೆಗಳಿಗೆ ಅಂಟಿಕೊಳ್ಳಲು ತಮ್ಮ ಪಾದಗಳನ್ನು ಬಳಸುತ್ತವೆ. ಸೂಕ್ತ ಮರ ಹುಡುಕಿ ಜೊತೆಗೂಡಿ ವಸಾಹತು ಕಟ್ಟಿಕೊಳ್ಳುತ್ತವೆ. ಹೀಗಾಗಿ ಹಗಲಿನಲ್ಲಿ ಅವುಗಳ ಗೂಡು ಹುಡುಕುವುದು ಸುಲಭ. ರಾತ್ರಿಯಲ್ಲಿ ಬೆಳೆ ತಿನ್ನುವ ಕಾರಣದಿಂದ ಅವುಗಳು ಮಾಡಿದ ಹಾನಿ ಹೆಚ್ಚು ಬೇಗನೇ ಕಂಡುಬರುವುದಿಲ್ಲ.

ಅವುಗಳ ಸಂಖ್ಯೆ ಏಕೆ ಕಡಿಮೆಯಾಗುತ್ತಿವೆ?

ದೊಡ್ಡ ಮರಗಳಲ್ಲಿ ಅವುಗಳು ಮರಿ ಮಾಡುತ್ತವೆ. ಮರಿ ಮಾಡುವ ಸ್ಥಳಗಳಿಗೆ ಸಮಸ್ಯೆ ಉಂಟಾದಾಗ ಅಥವಾ ಮರ ಕಡಿದಾಗ ವಸಾಹತುಗಳು ದುರ್ಬಲಗೊಳ್ಳಬಹುದು. ಆವಾಸಸ್ಥಾನ ನಷ್ಟ ಮತ್ತು ಬೇಟೆಯಿಂದಾಗಿ ಅವುಗಳ ಸಂಖ್ಯೆ ಇಳಿಯುತ್ತಿವೆ.

ಈ ಜಾತಿಗಳನ್ನು ಐತಿಹಾಸಿಕವಾಗಿ ಹೆಚ್ಚು ಬೇಟೆಯಾಡಲಾಗಿವೆ. ಇವುಗಳ ಔಷಧೀಯ ಗುಣಗಳು ಮತ್ತು ಕಾಮೋತ್ತೇಜಕವಾಗಿ ಬಳಸುವ ಸುತ್ತ ಅನೇಕ ನಂಬಿಕೆಗಳು ಬೆಳೆದಿವೆ. ಮಾನವ ಸಹಬಾಳ್ವೆಯ ಸಂದರ್ಭ ಕೆಲವೊಮ್ಮೆ ನಗರ ಪ್ರದೇಶಗಳ ಬಳಿ ಮರಿ ಮಾಡುವ ಸ್ಥಳಗಳಿಗೆ ಸಂಘರ್ಷವಾಗಿವೆ. ದೊಡ್ಡ ವಸಾಹತುಗಳು ಎಂದರೆ ಗದ್ದಲ ಮತ್ತು ಗಲೀಜು ತರಬಹುದು. ಹಣ್ಣಿನ ಮರಗಳ ಬಳಿ ಅವುಗಳ ಉಪಸ್ಥಿತಿಯಿಂದಾಗಿ ನಿವಾಸಿಗಳು ಮತ್ತು ಬೆಳೆಗಾರರಲ್ಲಿ ಕಳವಳ ಮೂಡಬಹುದು ಎಂದು ಅಭಿಪ್ರಾಯಪಡುತ್ತಾರೆ ಇಂದ್ರಜಿತ್ ಘೋರ್ಪಡೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor