×
Ad

ಯಾದಗಿರಿ, ಗುರುಮಠಕಲ್ ಮತಕ್ಷೇತ್ರದ ಪ್ರಮುಖರಿಗೆ ಬಿಜೆಪಿಯಿಂದ ಕಾರ್ಯಾಗಾರ

Update: 2025-12-17 18:52 IST

ಯಾದಗಿರಿ: ಚುನಾವಣಾ ಆಯೋಗವು ಬೂತ್‌ ಮಟ್ಟದ ತನ್ನ ಅಧಿಕಾರಿ ಮೂಲಕ ಮತಕ್ಷೇತ್ರದ ಪ್ರತಿ ಬೂತ್‌ನಲ್ಲಿ ನಡೆಸಲಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ವೇಳೆ ಬಿಜೆಪಿಯ ಬಿಎಲ್‌ -1 ಮತ್ತು 2 ಜೊತೆಗಿದ್ದು, ಆಯೋಗದ ಗೈಡ್ ಲೆನ್ ಪ್ರಕಾರ ಎಲ್ಲವೂ ಸರಿಯಾಗಿ ಪರಿಶೀಲನೆ ಮಾಡಬೇಕೆಂದು ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತ ಬಿಜೆಪಿ ರಾಜ್ಯ ಸಮಿತಿ ಸಂಚಾಲಕ ಜಗದೀಶ್‌ ಹಿರೇಮನಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಯಾದಗಿರಿ ಮತ್ತು ಗುರುಮಠಕಲ್ ವಿಧಾನಸಭಾ ಮತಕ್ಷೇತ್ರಗಳ ಪ್ರಮುಖರಿಗಾಗಿ ಏರ್ಪಡಿಸಿದ್ದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಬಿಎಲ್‌ಎ -2 ಕಾರ್ಯಾಗಾರದಲ್ಲಿ ಮಾತನಾಡಿದ ಜಗದೀಶ್‌ ಹಿರೇಮನಿ, ಮತದಾರರ ಪಟ್ಟಿಗೆ ಹೊಸಬರ ಸೇರ್ಪಡೆ, ಇಲ್ಲದವರ ಅಳಿಸುವಿಕೆ ಮತ್ತು ಆ ಕ್ಷೇತ್ರಕ್ಕೆ ಸಂಬಂಧವಿಲ್ಲದವರ ಹೆಸರು ಸೇರಿಸಿದ್ದರೆ ತೆಗೆಯುವುದು ಸೇರಿದಂತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಆಯೋಗದ ಅಧಿಕಾರಿಯೊಂದಿಗೆ ಸಹಕರಿಸಿ ಮತದಾರರ ಪಟ್ಟಿ ಸಿದ್ದಪಡಿಸುವ ಕೆಲಸಕ್ಕೆ ಸಜ್ಜಾಗಬೇಕು ಎಂದು ಹೇಳಿದರು.  

1987ರಿಂದ 2004ರವರೆಗಿನ ಮತದಾರರ ಪಟ್ಟಿಯಲ್ಲಿ ಹುಳುಕು ಇರುವುದು ಕಡಿಮೆ ಎಂದು ಭಾವಿಸಿರುವ ಬಿಜೆಪಿ, ನಂತರ ಅಂದರೆ 2004ರ ನಂತರ 2025ರ ತನಕ ಪಟ್ಟಿಯಲ್ಲಿ ಸೇರಿರುವ ಹೆಸರುಗಳಲ್ಲಿ ಬಹಳಷ್ಟು ಲೋಪದೋಷಗಳು ಇರುವ ಬಗ್ಗೆ ಪಕ್ಷಕ್ಕೆ ಅನುಮಾನವಿದ್ದು, ಅದನ್ನು ಶುದ್ದಿಕರಿಸುವ ಕಾಲ ಬಂದಿದೆ ಎಂದು ಹಿರೇಮನಿ ಹೇಳಿದರು.

ಎರಡು ವಿಧಾನಸಭಾ ಮತಕ್ಷೇತ್ರಗಳ ಈ ಕಾರ್ಯಾಗಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಹಿರಿಯ ಮುಖಂಡರಾದ ರಾಚಣ್ಣಗೌಡ ಮುದ್ನಾಳ ದೇವೇಂದ್ರನಾಥ ನಾದ್, ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಸಿದ್ದಣ್ಣ ಗೌಡ ಕಾಡಂನೊರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ ಕುರಕುಂದಿ, ಮೆಲಪ್ಪ ಗುಳಗಿ, ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜಶೇಖರ ಕಾಡಮ್ಮನೂರ, ನಗರ ಮಂಡಲ ಅಧ್ಯಕ್ಷರಾದ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ, ಬಿಎಲ್‌ -1 ದೇವೇಂದ್ರಪ್ಪ ಕೊಂಚಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತಾ ಚವ್ಹಾಣ, ವೀಣಾ ಮೋದಿ, ಮಂಡಲ ಅಧ್ಯಕ್ಷ ನರಸಿಂಹಲು ನಿರಟ್ಟಿ, ವೆಂಕಟಪ್ಪ ಅವಂಗಪೂರ, ಮಲ್ಲಿಕಾರ್ಜುನ ಹೊನಗೇರಾ, ಲಕ್ಷಣ ನಾಯಕ ಓಳಾಬಾಪುರ, ಅಮೃತಾ ಬೊರಬಂಡಾ, ಬಿಎಲ್‌ 1 ಮರಿಲಿಂಗ ಜನಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News