ಯಾದಗಿರಿ: ಗುರುಮಿಠಕಲ್-ಯಾದಗಿರಿ ಮತಕ್ಷೇತ್ರದ ಯುವನಾಯಕರಾದ ಬಿ.ಎಸ್. ವೀರಾರಡ್ಡಿ ಮುದ್ನಾಳ ಅವರು ಸೋಮವಾರ ಕಲಬುರಗಿಯ ಸಂಸದರಾದ ರಾಧಾಕೃಷ್ಣ ದೊಡ್ಮನಿ ನಿವಾಸದಲ್ಲಿ ಅವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಂಸದ ರಾಧಾಕೃಷ್ಣ ದೊಡ್ಮನಿ ಮಾತನಾಡಿ, ಮಾಜಿ ಶಾಸಕ ದಿ. ಡಾ. ವೀರಬಸವಂತರಡ್ಡಿ ಮುದ್ನಾಳ ಅಳಿಯರಾದ ವೀರಾರಡ್ಡಿ ಮುದ್ನಾಳ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಗುರುಮಿಠಕಲ್-ಯಾದಗಿರಿ ಮತಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುರಪುರ ಶಾಸಕರಾದ ರಾಜಾ ವೇಣುಗೋಪಾಲ ನಾಯಕ, ರಾಜ್ಯ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಕೆಪಿಸಿಸಿ ಸದಸ್ಯ ಶರಣಪ್ಪ ಮಾನೇಗಾರ, ಗುರುಮಿಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಚಪೇಟ್ಲಾ, ಮುಖಂಡರಾದ ಸಾಯಿಬಣ್ಣ ಬೋರಬಂಡ, ಬಾಲಪ್ಪ ನೀರಟ್ಟಿ, ಬಸವರಾಜ ದಳಪತಿ, ಕಾಶಪ್ಪ ಚಿನ್ನಾಕಾರ, ಶರಣಪ್ಪ ಮೋಟ್ನಳ್ಳಿ, ಅಮೀರ್ ಅಲಿ ಸಾಹುಕಾರ, ಗುಂಡಪ್ಪ ಇಟಕಾಲ್, ಶಿವಾನಂದ ದೇವರಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor