×
Ad

ಯಾದಗಿರಿ: ರೈತರಿಂದ ಭತ್ತ, ಕಿರು ಸಿರಿಧಾನ್ಯಗಳನ್ನು ಖರೀದಿಸಲು ರೈತರ ನೊಂದಣಿ ಕೇಂದ್ರ ಆರಂಭ

Update: 2025-10-18 19:13 IST

ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ಯಾದಗಿರಿ: 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಮತ್ತು ಕಿರು ಸಿರಿಧಾನ್ಯಗಳನ್ನು (ಸಾಮೆ ಮತ್ತು ನವಣೆ) ಹಾಗೂ ಬಿಳಿಜೋಳ ಖರೀದಿಸಲು ರೈತರ ನೊಂದಣಿ ಕೇಂದ್ರ ಆರಂಭಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಸ್ಟಾರ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಮತ್ತು ಕಿರು ಸಿರಿಧಾನ್ಯಗಳನ್ನು (ಸಾಮೆ ಮತ್ತು ನವಣೆ) ಹಾಗೂ ಬಿಳಿಜೋಳ ಖರೀದಿಸಲು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ-ಸಾಮಾನ್ಯ ಪ್ರತಿ ಕ್ವಿಂಟಾಲ್ 2369 ರೂ.ಗಳ ಹಾಗೂ ‘ಎ’ ಗ್ರೇಡ್ ಪ್ರತಿ ಕ್ವಿಂಟಾಲ್‌ಗೆ 2389 ರೂ.ಗಳ ರಂತೆ ಮತ್ತು ಬಿಳಿ ಜೋಳ ಹೈಬ್ರಿಡ್ ಪ್ರತಿ ಕ್ವಿಂಟಾಲ್‌ಗೆ 3699 ರೂ.ಗಳ ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‌ಗೆ 3749 ರೂ.ಗಳ ಖರೀದಿಸಲು ಈ ಕೆಳಕಂಡ ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಯಾದಗಿರಿ, (ನೊಂದಣಿ ಕೇಂದ್ರ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಸುರಪೂರ ಸಗಟು ಮಳಿಗೆ, ವೆಂಕಟಾಪುರ, (ನೋಂದಣಿ ಕೇಂದ್ರ), ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಆವರಣ ಶಹಾಪೂರ, (ನೋಂದಣಿ ಕೇಂದ್ರ), ತಾಲ್ಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, ಟಿ.ಎ.ಪಿ.ಸಿ.ಎಂ.ಎಸ್. ಆವರಣ (ಮಹಾದೇವಪ್ಪ ಬಳೆ ಕಲ್ಯಾಣ ಮಂಟಪ ಎದುರುಗಡೆ, ತಾಳಿಕೋಟೆ ರಸ್ತೆ), (ನೋಂದಣಿ ಕೇಂದ್ರ) ಹುಣಸಗಿ, ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ ಎಂಬ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು, ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಬೇಕು.

ಸರ್ಕಾರ ಆದೇಶ ಸಂಖ್ಯೆ ಇ-ಆನಾಸ 123 ಆರ್.ಪಿ.ಆರ್ 2025 (1859274) ಬೆಂಗಳೂರು 2025ರ ಸೆಪ್ಟೆಂಬರ್ 12ರ ಮತ್ತು ಸರ್ಕಾರ ಆದೇಶ ಸಂಖ್ಯೆ: ಆನಾಸ 106 ಆರ್‌ಪಿಆರ್ 2025 ಭಾ-2(1920388) ಬೆಂಗಳೂರು 2025ರ ಸೆಪ್ಟೆಂಬರ್ 20ರ ಸರ್ಕಾರದ ಆದೇಶ ಪ್ರಕಾರ ಈ ಕೆಳಕಂಡ ಮಾರ್ಗ ಹೊರಡಿಸಿರುತ್ತಾರೆ. ಮಾರ್ಗ ಸೂಚಿಸಿದೆ.

ಭತ್ತವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 50 ಕ್ವಿಂಟಾಲ್ ಖರೀದಿಸುವುದು. ಪ್ರತಿ ರೈತರಿಂದ ಹಿಡುವಳಿಯನ್ನಾಧರಿಸಿ ಪ್ರತಿ ಎಕರೆಗೆ 15 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 150 ಕ್ವಿಂಟಾಲ್ ಬಿಳಿ ಜೋಳವನ್ನು ಖರೀದಿಸುವುದು. ಭತ್ತವನ್ನು ರೈತರು ಅವರ ಚೀಲಗಳಲ್ಲಿ ತಂದು ಖರೀದಿ ಕೇಂದ್ರಗಳಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಾಲ್ ಚೀಲಕ್ಕೆ 6 ರೂ.ಗಳ ರಂತೆ ಖರೀದಿ ಏಜೆನ್ಸಿಗಳು ರೈತರಿಗೆ ಪಾವತಿಸಬೇಕು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಖರೀದಿಸ ಬೇಕಾಗಿರುವುದರಿಂದ ರೈತ ಭಾಂದವರು ನೊಂದಣಿ ಕೇಂದ್ರಗಳಲ್ಲಿ 2025ರ ಸೆಪ್ಟೆಂಬರ್ 15 ರಿಂದ 2025ರ ಅಕ್ಟೋಬರ್ 31ರ ವರೆಗೆ ನೊಂದಣಿ ಮಾಡಿಕೊಳ್ಳಲಾಗುವುದು ಹಾಗೂ 2025ರ ನವೆಂಬರ್ 1 ರಿಂದ 2026ರ ಫೆಬ್ರವರಿ 28ರ ಅವಧಿಯವರೆಗೆ ಭತ್ತ ಖರೀದಿಸುವುದು ಹಾಗೂ 2025ರ ಡಿಸೆಂಬರ್ 1 ರಿಂದ 2026ರ ಮಾರ್ಚ್ 31ರ ವರೆಗೆ ನೊಂದಣಿ ಮಾಡಿಕೊಳ್ಳಬೇಕು. ಹಾಗೂ 2026ರ ಜನವರಿ 1 ರಿಂದ 2026ರ ಮಾರ್ಚ್ 31ರ ಅವಧಿಯವರೆಗೆ ಬಿಳಿ ಜೋಳ ಖರೀದಿಸಲಾಗುವುದು ಜಿಲ್ಲೆಯ ರೈತಭಾಂದವರು ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ದೂ.ಸಂ. 8618860551, ಯಾದಗಿರಿ ತಾಲ್ಲೂಕು ಖರೀದಿ ಕೇಂದ್ರಗಳ ಮೇಲ್ವಿಚಾರಕರು ವಿಠ್ಠಲ್ ಬಂದಾಳ ಮೊ.ನಂ. 8971236664, ಶಹಾಪೂರ ತಾಲ್ಲೂಕು ಬಸವರಾಜ ಪತ್ತಾರ ಮೊ.ನಂ. 8861819836, ಸುರಪೂರ ತಾಲ್ಲೂಕು ಆದಯ್ಯ ಹಿರೇಮಠ ಮೊ.ನಂ. 8660813747, ಹುಣಸಗಿ ತಾಲ್ಲೂಕು ಸಿ.ಎಸ್.ರಾಜು ಮೊ.ನಂ.9632659336ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News