×
Ad

ಯಾದಗಿರಿ| ಡಿ. 22 ರಿಂದ ಮೂರು ದಿನಗಳ ಕಾಲ ಪಲ್ಸ್ ಪೋಲಿಯೋ ಅಭಿಯಾನ: ತಹಶೀಲ್ದಾರ್ ಹೆಚ್.ಎ.ಸರಕಾವಸ್

Update: 2025-12-07 21:53 IST

ಸುರಪುರ:  ಇದೇ ಡಿ.21 ರಿಂದ 24ರವರೆಗೆ 0-5 ವರ್ಷ ದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕಾ ಹನಿ ಹಾಕುವ ಅಭಿಯಾನ ಮೂರು ದಿನಗಳ ಕಾಲ ನಡೆಯಲಿದೆ ಎಂದು ತಹಶೀಲ್ದಾರ್ ಹೆಚ್.ಎ.ಸರಕಾವಸ್ ಹೇಳಿದರು.

ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಎ.ಸರಕಾವಸ್, ಸಾರ್ವಜನಿಕರು ತಪ್ಪದೇ ಐದು ವರ್ಷದೊಳಗಿನ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. 

ತಾಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪ ನಾಯಕ ಅವರು ಮಾತನಾಡಿ, 2025ನೇ ಸಾಲಿನಲ್ಲಿ 5 ವರ್ಷದೊಳಗಿನ ನಗರದ ಮಕ್ಕಳ ಸಂಖ್ಯೆ 7035, ಸುರಪುರ ತಾಲೂಕಿನ ಕೆಂಭಾವಿ, ಕಕ್ಕೇರಾ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 50,766 ಮಕ್ಕಳು ಸೇರಿ ಒಟ್ಟು 57,801 ಮಕ್ಕಳಿದ್ದು ಇವರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಒಟ್ಟು 248 ತಂಡಗಳು, ವ್ಯಾಕ್ಸಿನಟರ್ 496, ಮೇಲ್ವಿಚಾರಕರು 47, ಟ್ರಾಂಜಿಟ್ ಪಾಯಿಂಟ್ 11 ಇವೆ ಎಂದು ಹೇಳಿದರು. 

ಡಿಸೆಂಬರ್ 22 ರಿಂದ 24ರವರೆಗೆ ಮನೆ-ಮನೆಗೆ ತೆರಳಿ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಹಾಗೂ ಸುರಪುರ ಬಸ್ ನಿಲ್ದಾಣ, ತಿಮ್ಮಾಪುರ ಬಸ್ ನಿಲ್ದಾಣ, ಗಾಂಧಿ ವೃತ್ತದಲ್ಲಿಯೂ ಲಸಿಕೆ ಹಾಕುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಗಳು ಸಮನ್ವಯ ಸಾಧಿಸಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.

ದೇಶದಲ್ಲಿ ಪೋಲಿಯೋ ಮುಕ್ತವಾಗಿದ್ದರೂ ಮುಂದೆಯೂ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಇಒ ಬಸವರಾಜ ಸಜ್ಜನ್, ಜೆಸ್ಕಾಂ ಎಇಇ ರಫೀಕ್,  ಶಿಕ್ಷಣ ಸಂಯೋಜಕ ಶರಣ ಬಸವ ಗಚ್ಚಿನಮನಿ, ನಗರಸಭೆ ನೈರ್ಮಲ್ಯ ನಿರೀಕ್ಷಕ ಗುರುಸ್ವಾಮಿ ಹಿರೇಮಠ, ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ಜಾಕೀರ್ ಹುಸೇನ್, ಪವನ್ ಕುಮಾರ್ ಸನಾದಿ, ಜಯ ಕೆ.ಪವಾರ್, ರಾಜಶೇಖರ, ನಿಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News