ಯಾದಗಿರಿ | ಮನೆಕಳ್ಳತನಕ್ಕೆ ಯತ್ನ : ತಡೆಯಲು ಬಂದ ಮಹಿಳೆಗೆ ಚಾಕುವಿನಿಂದ ಇರಿತ
Update: 2025-12-08 13:38 IST
ಯಾದಗಿರಿ : ಹಾಡು ಹಗಲೇ ಹಾಡಹಗಲೇ ಮನೆಕಳ್ಳತನಕ್ಕೆ ಯತ್ನಿಸಿರುವ ಘಟನೆ ನಗರದ ಮಾತಾ ಮಾಣಿಕೇಶ್ವರಿ ನಗರದಲ್ಲಿ ಸೋಮವಾರ ಬೆಳಗ್ಗೆ 10.30 ರ ಸುಮಾರಿಗೆ ನಡೆದಿದೆ.
ಮನೆಯ ಯಜಮಾನಿಯ ಜಾಗುರುಕತೆಯಿಂದಾಗಿ ಮನೆಕಳ್ಳತನದ ಯತ್ನ ವಿಫಲಗೊಂಡಿದ್ದು, ಕಳ್ಳರು ಮಹಿಳೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಎಂದಿನಂತೆ ಅಡುಗೆ ಮಾಡುತ್ತಿದ್ದ ಮಹಿಳೆಗೆ ಮನೆಯಲ್ಲಿ ಶಬ್ದ ಕೇಳಿ ನೋಡಲು ಬಂದಾಗ ಕಳ್ಳರು ಇದ್ದದ್ದು ತಿಳಿದುಬಂದಿದೆ. ಈ ವೇಳೆ ಕೈಯಲ್ಲಿದ್ದ ಕಾರಪುಡಿ ಕಳ್ಳರ ಮೇಲೆ ಚೆಲ್ಲಿದಾಗ, ಕಳ್ಳರಲ್ಲಿ ಒರ್ವ ಮಹಿಳೆಯ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಅಷ್ಟರಲ್ಲಿಯೇ ಆಕೆ ಜೊರಾದ ಶಬ್ದ ಮಾಡಿದಾಗ ಅಕ್ಕಪಕ್ಕದವರು ಬಂದು ವಿಚಾರಿಸಿದಾಗ ಮನೆ ಕಳ್ಳತನಕ್ಕೆ ಬಂದ ವಿಷಯ ಗೊತ್ತಾಗಿದೆ.
ಕೂಡಲೇ ಸ್ಥಳಕ್ಕೆ ಎಸ್ ಪಿ ಪ್ರಥ್ವಿಕ್ ಶಂಕರ್, ಹೆಚ್ಚವರಿ ಎಸ್ ಪಿ ಧರಣೇಶ್, ಸಿಪಿಐ ಸುನೀಲ್ ಮೂಲಿಮನಿ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ.