×
Ad

ಹುಣಸಗಿ | ರೈತ ಸಂಘದ ಮಹಿಳಾ ಘಟಕ ರಚನೆ

ಆಯ್ಕೆಯಾದ ಪದಾಧಿಕಾರಿಗಳು ರೈತ ಸಂಘದ ತತ್ವ ಸಿದ್ದಾಂತಕ್ಕೆ ಬದ್ಧರಾಗಿರಬೇಕು : ದೇಸಾಯಿಗುರು

Update: 2025-12-30 20:09 IST

ಹುಣಸಗಿ : ಹೊಸದಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ರೈತ ಸಂಘದ ತತ್ವ–ಸಿದ್ಧಾಂತಗಳಿಗೆ ಬದ್ಧರಾಗಿದ್ದು, ರೈತರ ಹಿತ ಕಾಪಾಡಲು ಸದಾ ಸನ್ನದ್ಧರಾಗಿರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ (ಚೂನ್ನಪ್ಪ ಪೂಜಾರಿ ಬಣ) ರಾಜ್ಯ ಪ್ರಧಾನ ಸಂಚಾಲಕ ನಾಗಯ್ಯ ದೇಸಾಯಿಗುರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಮಹಿಳಾ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವುದು ರೈತ ಸಂಘದ ಪ್ರಮುಖ ಜವಾಬ್ದಾರಿಯಾಗಿದೆ. ಪದಾಧಿಕಾರಿಗಳು ಬದ್ಧತೆ ಮತ್ತು ಏಕತೆಯೊಂದಿಗೆ ಹೋರಾಟ ನಡೆಸಿದಾಗ ಮಾತ್ರ ರೈತರ ಸಮಸ್ಯೆಗಳಿಗೆ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ ಬಲಗೊಳ್ಳುತ್ತಿದ್ದು, ಈ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸುವ ಉದ್ದೇಶದಿಂದ ಮಹಿಳಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ರೈತ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳ ಮುಖವಾಣಿಯಾಗಿ ಕಾರ್ಯನಿರ್ವಹಿಸಬಾರದು. ರೈತಪರ ಹೋರಾಟಗಳನ್ನು ಪ್ರಾಮಾಣಿಕವಾಗಿ ನಡೆಸಿದಾಗಲೇ ಸಂಘಟನೆಗೆ ಮತ್ತು ಹೋರಾಟಗಳಿಗೆ ಜಯ ಸಿಗುತ್ತದೆ ಎಂದು ಹೇಳಿದರು.

ಮಹಿಳಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು:

ಸಂಗಮ್ಮ ಶೇಖರ ಮುದಗಲ್ (ಅಧ್ಯಕ್ಷೆ), ಗಿರೀಜಾ ಸಾಸನೂರ (ಉಪಾಧ್ಯಕ್ಷೆ), ಬೋರಮ್ಮ ಹೊಸಹಳ್ಳಿ, ನೇತ್ರಾ ಸಾಲವಾಡಗಿ ಹಾಗೂ ರೇಣುಕಾ ಕುಂಬಾರ (ಸದಸ್ಯರು).

ತಾಲೂಕು ಸಮಿತಿಗೆ ಹೊಸ ಸೇರ್ಪಡೆ:

ಮಲ್ಲನಗೌಡ ಅರಕೇರ, ಅಮರೇಶ ಕಟ್ಟಿಮನಿ, ಮಲ್ಲನಗೌಡ ಪಾಟೀಲ್, ಯಂಕಣ್ಣ ಹರನಾಳ ಹಾಗೂ ಅಮರೇಶ ಬಿರದಾರ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಂಕರ ದೇಸಾಯಿ, ಅಮರೇಶಗೌಡ ಬಿರದಾರ, ಶಂಕರ ಜಾಧವ, ಬಸವರಾಜ ಜಡಜಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News