ಯಾದಗಿರಿಯಲ್ಲಿ ರಾತ್ರೋರಾತ್ರಿ ಅಕ್ರಮ ಮರಳು ಸಾಗಣೆ: ಪೊಲೀಸರ ನಿರ್ಲಕ್ಷ್ಯ ಆರೋಪ
ಸಾಂದರ್ಭಿಕ ಚಿತ್ರ
ಯಾದಗಿರಿ : ಜಿಲ್ಲೆಯಾದ್ಯಂತ ದಿನನಿತ್ಯ ಅಕ್ರಮವಾಗಿ ಮರಳು ಸಾಗಣೆ ದಂಧೆ ಹಗಲು-ರಾತ್ರಿಯೆನ್ನದೆ ರಾಜಾರೋಷವಾಗಿ ನಡೆಯುತ್ತಿದೆ. ಮರಳು ಕಳ್ಳರ ಹೆಡೆಮುರಿ ಕಟ್ಟಬೇಕಾದ ಪೊಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನಿಸಿ ಈ ದಂಧೆ ನಡೆಯುತ್ತಿರುವ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಜಿಲ್ಲೆಯ ಚಾಮನಾಳ ಗ್ರಾಮದ ಹಳ್ಳದಿಂದ ಮತ್ತು ಗಂಗಾನಗರ ಹಳ್ಳದಿಂದ ದೊಡ್ಡಮಟ್ಟದಲ್ಲಿ ರಾತ್ರಿ ವೇಳೆಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಆಕ್ರಮ ಮರಳು ಸಾಗಣೆ ಮಾಡುತ್ತಿರುವ ಟ್ರ್ಯಾಕ್ಟರ್ ಡ್ರೈವರಗಳಿಗೆ ರಾತ್ರಿ ಮರಳುಗಾರಿಕೆ ಮಾಡಲು ಕೆಲವು ಪೊಲೀಸರು ತಡೆಯದೆ ಲಂಚ ಪಡೆದು ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನಲಾಗಿದೆ.
ಕೆಲವು ಪೊಲೀಸ್ ಸಿಬ್ಬಂದಿಯ ಸ್ವಾರ್ಥದಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ರಾಯಲ್ಟಿ ಪಡೆಯದೆ ಆಕ್ರಮ ಮರಳು ಸಾಗಣೆ ದಂಧೆಯನ್ನು ತಕ್ಷಣ ತಡೆದು ಇದರಲ್ಲಿ ಶಾಮಿಲಾಗಿರುವ ಸಿಬ್ಬಂದಿಯ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡರು ಆಗ್ರಹವಾಗಿದೆ.
ಗ್ರಾಮೀಣ ಭಾಗದಿಂದ ಬರುವ ರೈತಾಪಿವರ್ಗ, ಬಡಜನರನ್ನು ಪೊಲೀಸರು ದಾರಿಯಲ್ಲಿ ಅಡ್ಡಗಟ್ಟಿ ಕೆಲವು ನೆಪಹೇಳಿ ದಂಡ ಹಾಕುತ್ತಾರೆ.ಆದರೆ ಅಕ್ರಮ ಮರಳು ಗಾರಿಕೆ ನಡೆಸುತ್ತಿದ್ದರೂ ಪೋಲಿಸ್ ಇಲಾಖೆ ತಡೆಯುವಲ್ಲಿ ಎಷ್ಟೊಂದು ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
- ಬಸವರಾಜ ವಿಭೂತಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ, ಯಾದಗಿರಿ
ಸುದ್ದಿ ಮಾಡಲು ಹೋದ ಪತ್ರಕರ್ತನ ಮೇಲೆ ದಬ್ಬಾಳಿಕೆ
ಇಲ್ಲಿ ಬಂದು ನೀವು ವೀಡಿಯೊ ಮತ್ತು ಫೋಟೊ ಯಾಕೆ ತೆಗೆಯುತ್ತೀರಿ, ನಮ್ಮ ಮಾಲಕರಿಗೆ ಫೋನ್ ಮಾಡಿದ್ದೀನಿ, ಬರುತ್ತಿದ್ದಾರೆ ಎಂದು ಹೇಳಿ ಸುದ್ದಿ ಮಾಡಲು ಹೋದ ಪತ್ರಕರ್ತರ ವಾಹನ ನಿಲ್ಲಿಸಿ ದಬ್ಬಾಳಿಕೆ ಮಾಡಲಾಗಿದೆ.
ಪೊಲೀಸರು ಮರಳು ಕಳ್ಳ ಸಾಗಣೆ ೆ ಮಾಡುವ ಅನೇಕ ವಾಹನಗಳಿಗೆ ಬಹಳಷ್ಟು ಭಾರಿ ಸೀಝ್ ಮಾಡಿರುವುದರಿಂದ ಈಗ ಕೆಲವು ವಾಹನಗಳು ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್‌ಗಳು ಮತ್ತು ಲಾರಿಗಳು ಜಿಲ್ಲೆಯಲ್ಲಿ ಮರಳು ಸಾಗಣೆ ಮಾಡುತ್ತಿವೆ. ಇದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಅಕ್ರಮ ಮರುಳುಗಾರಿಕೆ ಜಿಲ್ಲೆಯಲ್ಲಿ ನಿಲ್ಲಬೇಕು.
-ಮರೆಪ್ಪ ಚಟ್ಟೇರಕರ್, ಡಿಎಸ್‌ಎಸ್, ಜಿಲ್ಲಾ ಸಂಚಾಲಕ, ಯಾದಗಿರಿ
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಮಾಡಲು ನಾವು ಅವಕಾಶ ನೀಡುವುದಿಲ್ಲ. ಆ ರೀತಿ ಏನಾದರೂ ಕಂಡು ಬಂದಲ್ಲಿ ಮಾಹಿತಿ ನೀಡಿದರೆ, ಮುಲಾಜು ಇಲ್ಲದೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
- ಪೃಥ್ವಿಕ್ ಶಂಕರ್, ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ