×
Ad

ಶಹಾಪುರ | ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ : ಸಚಿವ ಶರಣಬಸಪ್ಪಗೌಡ ದರ್ಶನಾಪುರ

Update: 2026-01-27 22:02 IST

ಶಹಾಪುರ : ಶಹಾಪುರ ಮತಕ್ಷೇತ್ರದ ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಪ್ರಮುಖ ಜವಾಬ್ದಾರಿಯಾಗಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ಬೆನಕನಹಳ್ಳಿ ಕ್ರಾಸ್‌ನಿಂದ ಕನ್ಯಾಕೊಳ್ಳೂರ ಅಗಸಿ ರಸ್ತೆಯಲ್ಲಿ 2024–25ನೇ ಸಾಲಿನ 5054 ಮಳೆ ಪರಿಹಾರ ಯೋಜನೆ ಅಡಿಯಲ್ಲಿ ಮಂಜೂರಾದ 1 ಕೋಟಿ 25 ಲಕ್ಷ ರೂ. ವೆಚ್ಚದ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಜನರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಪೂರಕ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ತಮ್ಮ ಅಭಿವೃದ್ಧಿ ಪರವಾದ ಚಿಂತನೆಗಳ ಮೇಲೆ ನಂಬಿಕೆ ಇಟ್ಟು ಜನರು ಆಶೀರ್ವಾದ ನೀಡಿರುವುದಾಗಿ ಸಚಿವರು ತಿಳಿಸಿದರು.

ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದೇ ತಮ್ಮ ರಾಜಕೀಯ ಧೋರಣೆಯಾಗಿದ್ದು, ಇಂದು ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಜನರ ಮೇಲಿನ ಋಣಭಾರವನ್ನು ಸ್ವಲ್ಪ ಮಟ್ಟಿಗೆ ತೀರಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ಪ್ರತಿಯೊಂದು ಅಭಿವೃದ್ಧಿ ಕಾರ್ಯ ಯಶಸ್ವಿಯಾಗಲು ಜನಸಹಕಾರ ಅತ್ಯಂತ ಅಗತ್ಯವೆಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ನಗರದ ರಾಕಂಗೇರ ಸಮೀಪ ಸಂಗೂಳ್ಳಿ ರಾಯಣ್ಣರ ಪೂಜೆ ನಾಮಫಲಕವನ್ನು ಸಚಿವರು ಉದ್ಘಾಟಿಸಿದರು. ನಂತರ 50 ಲಕ್ಷ ರೂ. ವೆಚ್ಚದ ತಾಲೂಕು ಪಂಚಾಯತ್ ಸಭಾಂಗಣ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಇಇ ಮಂಜುನಾಥ ಸಂಗಾವಿ, ಜೆಇ ಕಳ್ಳಯ್ಯ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಹಂತ ಚಂದಾಪುರ, ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ಡಾ. ಭೀಮಣ್ಣ ಮೇಟಿ, ನೀಲಕಂಠ ಬಡಿಗೇರ, ಮುಸ್ತಫ ದರ್ಬಾನ್, ಅಲ್ಲಾ ಪಟೇಲ್ ಮಕ್ತಾಪುರ, ಶಾಂತಗೌಡ ನಾಗನಟಿಗಿ, ಸದ್ದಾಂ ದಾದುಲ್ಲಾ, ಖಾಲೀದ್, ಮಲ್ಲಣ್ಣ ಉಳಂಡಗೇರಿ, ಮೆಲ್ಲಣಗೌಡ ತಿಪ್ಪನಹಳ್ಳಿ, ಶರಬಣ್ಣ ರಸ್ತಾಪುರ, ರವಿ ರಾಜಾಪುರ, ಭೀಮರಾಯ ಜುನ್ನಾ, ತಲಾಖ್ ಚಾಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News