ಸುರಪುರ | ಕಳ್ಳತನವಾದ ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರಿಸಿದ ಪೊಲೀಸರು
Update: 2026-07-26 22:21 IST
ಸುರಪುರ: ಸಾರ್ವಜನಿಕರು ತಮ್ಮ ಬೆಲೆ ಬಾಳುವ ವಸ್ತುಗಳು, ಮೊಬೈಲ್, ವಾಹನ, ಹಣ ಇವುಗಳ ಬಗ್ಗೆ ಸದಾಕಾಲ ಎಚ್ಚರ ವಹಿಸುವಂತೆ ಇನ್ಸ್‌ಪೆಕ್ಟರ್ ಉಮೇಶ್ ಎಂ ಸಾರ್ವಜನಿಕರಿಗೆ ಸಲಹೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ವಿವಿಧ ಕಡೆಗಳಲ್ಲಿ ಮೊಬೈಲ್ ಕಳೆದುಕೊಂಡವರಿಗೆ ಪತ್ತೆ ಮಾಡಲಾದ ಮೊಬೈಲ್‌ಗಳನ್ನು ವಿತರಿಸಿ ಮಾತನಾಡಿದ ಉಮೇಶ್ ಎಂ, ಇಂದು ಕಳ್ಳರು ತುಂಬಾ ಚಾಣಾಕ್ಷತೆ ವಹಿಸಿ ಜನರನ್ನು ಯಾಮಾರಿಸಿ ಕಳ್ಳತನ ಎಸಗುತ್ತಿದ್ದಾರೆ. ಅವುಗಳಲ್ಲಿ ಹಣ, ಆಭರಣ ಮತ್ತು ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ ಕೃಷ್ಣ ಸುಭೇದಾರ್, ಅಪರಾಧ ವಿಭಾಗದ ಸಿಬ್ಬಂದಿ ಸಣಕೆಪ್ಪ, ಪೊಲೀಸ್ ಪೇದೆ ಪ್ರಕಾಶ್ ನಾಯಕ ಕೊಂಕಲ್, ಹುಸೇನ್ ಸಾಬ್, ಲಕ್ಷ್ಮಣ ನಾಯಕ ಸಗರ, ಹುಲಿಗೆಪ್ಪ, ದಯಾನಂದ ಜಮಾದಾರ್ ಉಪಸ್ಥಿತರಿದ್ದರು.