ಯಾದಗಿರಿ | ಮೂರ್ಛೆ ರೋಗಕ್ಕೆ ತುತ್ತಾಗಿ ವ್ಯಕ್ತಿ ಮೃತ್ಯು
Update: 2025-02-10 21:50 IST
ಯಾದಗಿರಿ : ಜವಾಹರ್ ಕಾಲೇಜಿನ ಜವಾನನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಾನಂದ ಎನ್ನುವ ವ್ಯಕ್ತಿ ಮೂರ್ಛೆ ರೋಗಕ್ಕೆ ತುತ್ತಾಗಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಬಾಲಾಜಿ ಕಲ್ಯಾಣ ಮಂಟಪದ ಪಕ್ಕದಲ್ಲಿ ನಡೆದಿದೆ.
ನಗರದ ಜವಾಹರ್ ಕಾಲೇಜ್ನಲ್ಲಿ ಜವಾನ್ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಾನಂದ (55) ಅವರ ಮೃತದೇಹ ಬಾಲಾಜಿ ಕಲ್ಯಾಣ ಮಂಟಪದ ಪಕ್ಕದಲ್ಲಿ ಪತ್ತೆಯಾಗಿದೆ.
ನಗರದ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.